ಶಿರಸಿ: ನ.14ರಂದು ವಿಶ್ವ ಮಧುಮೇಹ ದಿನವೆಂದು ಗುರುತಿಸಲಾಗಿದೆ. ಈ ಮಧುಮೇಹವೆಂಬ ಸೈಲೆಂಟ್ ಕಿಲ್ಲರ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಹುತೇಕ ಜನರಿಗೆ ಇದರ ಹೆಚ್ಚಿನ ಮಾಹಿತಿ, ಲಕ್ಷಣಗಳು, ಚಿಕಿತ್ಸೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಇದರ ಅಂಗವಾಗಿ ಮಧುಮೇಹದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜಾಥಾವನ್ನು ನವೆಂಬರ್ 14 ಸೋಮವಾರದಂದು ಬೆಳಿಗ್ಗೆ 8.30ಕ್ಕೆ ಶಿರಸಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಜಾಗೃತಿ ಜಾಥಾಕ್ಕೆ DYSP ರವಿ ನಾಯ್ಕ್ ಚಾಲನೆ ನೀಡಿ ಜೊತೆಗೂಡಲಿದ್ದಾರೆ. ಜಾಥಾ ನಗರದ IMA ಸುವರ್ಣ ಸೌಧದಿಂದ ಆರಂಭಗೊಳ್ಳಲಿದ್ದು ಅಶ್ವಿನಿ ಸರ್ಕಲ್,ಹೊಸಪೇಟೆ ರಸ್ತೆ,ದೇವಿಕೆರೆ,ನಟರಾಜ್,ಹಳೆ ಬಸ್ ಸ್ಟಾಂಡ್, ಸಿಪಿ ಬಜಾರ್, ಝೂ ಸರ್ಕಲ್, ರಾಘವೇಂದ್ರ ಸರ್ಕಲ್,ವೀರಸಾವರ್ಕರ್ ರೋಡ್, ದೇವಿಕೆರೆ ಸರ್ಕಲ್, ಭಗತ್ ಸಿಂಗ್ ರಸ್ತೆ,ರೋಟರಿ ಆಸ್ಪತ್ರೆ ಮೂಲಕ ಸಾಗಿ ಸುವರ್ಣ ಸೌಧದಲ್ಲಿ ಕೊನೆಗೊಳ್ಳಲಿದ. ಎಲ್ಲರಲ್ಲೂ ಜನ ಜಾಗೃತಿ ಮೂಡಿಸಲು ಜಾಥಾದಲ್ಲಿ ಪಾಲ್ಗೊಂಡು ಉಪಯೋಗ ಪಡೆದುಕೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘದ ಪರವಾಗಿ ಐ. ಎಂ. ಎ. ಅಧ್ಯಕ್ಷ ಡಾ. ರಾಮಾ ಹೆಗಡೆ,ಐ. ಎಂ. ಎ. ಕಾರ್ಯಕರ್ತೆ ಡಾ. ರಾಧಿಕಾ ಮರಾಠೆ,ಐ. ಎಂ. ಎ. ಕೋಶಾಧಿಕಾರಿ ಡಾ. ಶೃತಿ. ಎನ್ ವಿನಂತಿಸಿದ್ದಾರೆ.