ಶಿರಸಿ: ಸ್ವಾತಂತ್ರ್ಯ 75ರ ನಿಮಿತ್ತ ದೇವನಳ್ಳಿ, ಮಂಜುಗುಣಿ, ಬಂಡಲ, ಹೆಗಡೆಕಟ್ಟಾ, ಹುಣಸೆಕೊಪ್ಪ, ಸಾಲ್ಕಣಿ ಪಂಚಾಯತ ವ್ಯಾಪ್ತಿಯ ಹಿಂದೂ ಸಮಾಜ ಬಾಂಧವರ ನೇತೃತ್ವದಲ್ಲಿ ‘ಹಿಂದೂ ಸಮಾಜೋತ್ಸವ’ ಕಾರ್ಯಕ್ರಮವನ್ನು ನ.13, ರವಿವಾರದಂದು ಸಂಜೆ 4 ಗಂಟೆಗೆ ತಾಲೂಕಿನ ದೇವನಳ್ಳಿಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಠದ ಬ್ರಹ್ಮೈಕ್ಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಆಶೀರ್ವಾದದೊಂದಿಗೆ ಅಂಡಗಿಯ ನಾಮಧಾರಿ ಗುರುಮಠದ ಶ್ರೀ ಶ್ರೀ ಶ್ರೀ ಕಲ್ಯಾಣ ಸ್ವಾಮಿಗಳು, ಶಿರಸಿ ಬಣ್ಣದಮಠದ ಶ್ರೀ. ಮ.ನಿ.ಪ್ರ. ಶ್ರೀ ಶಿವಲಿಂಗ ಮಹಾಸ್ವಾಮಿಗಳು,ಹಾಗೂ ಶ್ರೀಕ್ಷೇತ್ರ ಮಂಜುಗುಣಿಯ ಅರ್ಚಕ ವೇ. ಮೂ. ಶ್ರೀನಿವಾಸ ಭಟ್ ಗೌರವ ಉಪಸ್ಥಿತಿ ನೀಡಲಿದ್ದಾರೆ. ಹಾಗೆಯೇ ಯುವಾ ಬ್ರಿಗೇಡ್ ಮಾರ್ಗದರ್ಶಕ ,ರಾಷ್ಟ್ರ ಚಿಂತಕ ಚಕ್ರವರ್ತಿ ಸೂಲಿಬೆಲೆಯವರಿಂದ ದಿಕ್ಸೂಚಿ ಭಾಷಣ ನಡೆಯಲಿದೆ.
ಮಧ್ಯಾಹ್ನ 3.15ರಿಂದ ದೇವನಳ್ಳಿ ಪ್ರಮುಖ ರಸ್ತೆಯಿಂದ ಕಾರ್ಯಕ್ರಮದ ಸ್ಥಳದವರೆಗೆ ಹಲವು ಜಾನಪದ ತಂಡಗಳಿಂದ ಶೋಭಾಯಾತ್ರೆ ನಡೆಯಲಿದೆ.
ಸ್ವಾತಂತ್ರ್ಯ ಲಭಿಸಿ 75 ವರ್ಷದ ಈ ಸುಸಂದರ್ಭದಲ್ಲಿ ದೇಶ, ಧರ್ಮ, ಸಂಸ್ಕೃತಿಗಳ ಪುನರುತ್ಥಾನ ಕಾರ್ಯವನ್ನು ಮಾಡುತ್ತ ನಮ್ಮ ಭಾರತ ದೇಶವನ್ನು ಪರಮ ವೈಭವಕ್ಕೆ ಕೊಂಡೊಯ್ಯುವ ಮಹಾನ್ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.