• first
  second
  third
  Slide
  previous arrow
  next arrow
 • ಶ್ರಮಜೀವಿ ಬೀಜು ಬಾಳಾ ನಾಯ್ಕ ನಿಧನ

  300x250 AD

  ಯಲ್ಲಾಪುರ: ತಾಲೂಕಿನ ಹಿರಿಯ ಸಹಕಾರಿ, ಸಮಾಜಸೇವಕ ಇಡಗುಂದಿ ಚಿನ್ನಾಪುರದ ಪ್ರೇಮಾನಂದ ನಾಯ್ಕರವರ ತಾಯಿ ಬೀಜು ಬಾಳಾ ನಾಯ್ಕ ಅವರು ಗುರುವಾರ ರಾತ್ರಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
  ಮೂಲತಃ ಅಂಕೋಲಾ ಅವರ್ಸಾ ಮತ್ತು ಬೇಲೆಕೇರಿ ಬೊಗ್ರಿಗದ್ದೆಯವರಾದ ಬೀಜು ನಾಯ್ಕರವರು 1964ರಲ್ಲಿ ಇಡಗುಂದಿ ಚಿನ್ನಾಪುರದಲ್ಲಿ ಪತಿಯೊಂದಿಗೆ ಬಂದು ನೆಲೆಸಿದ್ದರು, ಹೊಟೇಲ್ ಪ್ರಾರಂಭಿಸಿ ಅತ್ಯಂತ ಶ್ರಮಜೀವಿಯಾಗಿ ಕೆಲಸಮಾಡಿ, ತಮ್ಮ ನಾಲ್ವರು ಪುತ್ರರು ಹಾಗೂ ಇಬ್ಬರುನಪುತ್ರಿಯರಿಗೆ ಶಿಕ್ಷಣ ಸಂಸ್ಕಾರ ನೀಡುವುದರ ಮೂಲಕ ಸಮಾಜದ ಗಣ್ಯ ವ್ಯಕ್ತಿಗಳಾಗಿ ಬೆಳೆಸಿದ್ದರು.
  ಇಡಗುಂದಿ ಸೊಸೈಟಿಯ ಹಾಲಿ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ, ಯಲ್ಲಾಪುರ ಬಂಡಾರಿ ಸಮಾಜದ ಅಧ್ಯಕ್ಷ, ಪುತ್ರರಾದ ಪ್ರೇಮಾನಂದ ನಾಯ್ಕ, ಇನ್ನೊರ್ವ ಪುತ್ರ ಪ್ರಥಮ ದರ್ಜೆ ಗುತ್ತಿಗೆದಾರರಾದ ಅಶೋಕ ನಾಯ್ಕ, ಮತ್ತೋರ್ವ ಪುತ್ರ ಸಮಾಜಸೇವಕ ಉದ್ಯಮಿ ಅನೀಲ ನಾಯ್ಕ, ಕಿರಿಯ ಪುತ್ರ ಇಡಗುಂದಿ ಗ್ರಾ.ಪಂ ಸದಸ್ಯ ಸತೀಶ ನಾಯ್ಕ, ಯಲ್ಲಾಪುರ ಪಟ್ಟಣ ಪಂಚಾಯತಿ ಸದಸ್ಯೆ ಗೀತಾ ದೇಶ ಬಂಡಾರಿ, ಇನ್ನೊರ್ವ ಪುತ್ರಿ ಸುರೇಖಾ ಅಸ್ಪೀಕರ್ ಗೋಕರ್ಣ ಹಾಗೂ ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
  ಸಚಿವ ಶಿವರಾಮ ಹೆಬ್ಬಾರ್, ಇಡಗುಂದಿ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್ಟ ಕೊಡ್ಲಗದ್ದೆ, ಝಡ್.ಪಿ ಸಹಾಯಕ ಕಾರ್ಯ ನಿರ್ವಾಹಕ ಎಂಜೀನಿಯರ್ ಅಶೋಕ ಬಂಟ್, ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗಡೆ, ಬಂಡಾರಿ ಸಮಾಜದ ಜಿಲ್ಲಾಬಪ್ರಧಾನ ಕಾರ್ಯದರ್ಶಿ ಎಂ.ಆರ್.ನಾಯ್ಕ ಹಾಗೂ ಅಧ್ಯಕ್ಷರು ಸಮಿತಿ ಸದಸ್ಯರು, ನಿವೃತ್ತ ಡಿಆರ್‌ಎಫ್‌ಒ ಕೃಷ್ಣ ಎಚ್.ನಾಯ್ಕ ಮುಂತಾದವರು ಸಂತಾಪ ಸೂಚಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top