• Slide
    Slide
    Slide
    previous arrow
    next arrow
  • ಜಾರಕಿಹೊಳಿಯಿಂದಾಗಿ ಹಿಂದುಗಳ ಬಗೆಗಿನ ಕಾಂಗ್ರೆಸ್ ಅಭಿಪ್ರಾಯ ಸ್ಪಷ್ಟವಾಗಿದೆ: ಗುರುಪ್ರಸಾದ ಹರ್ತೆಬೈಲ್

    300x250 AD

    ಶಿರಸಿ: ಪ್ರತಿಯೊಬ್ಬ ಹಿಂದುವಿಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವಮಾನ ಮಾಡಿದ್ದಾರೆ. ಹಿಂದುಗಳ ಬಗ್ಗೆ ಸತೀಶ್ ಜಾರಕಿಹೊಳಿ & ಕಾಂಗ್ರೆಸ್ಸಿಗಿರುವ ಅಭಿಪ್ರಾಯ ಇದರಿಂದ ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದ್ದಾರೆ.
    ತುಷ್ಟೀಕರಣವನ್ನೇ ನೆಚ್ಚಿಕೊಂಡಿದ್ದ ಕಾಂಗ್ರೆಸ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದೆ, ಸರ್ವನಾಶದತ್ತ ಹೆಜ್ಜೆ ಇಟ್ಟಿದೆ. ಭಾರತ ಹಿಂದುಸ್ತಾನವೇ ಎಂಬುದನ್ನು ಸತೀಶ್ ಜಾರಕಿಹೊಳಿ ಅರ್ಥ ಮಾಡಿಕೊಳ್ಳಬೇಕಿದೆ. ಪದದ ಅರ್ಥ ಕೆದಕುವ- ಕೆಣಕುವ ನೆಪದಲ್ಲಿ ರಾಷ್ಟ್ರದ- ಧರ್ಮದ ಅವಹೇಳನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
    ಮತಿಗೆಟ್ಟ ಹೇಳಿಕೆಗಳನ್ನಾದರೂ ಕ್ಷಮಿಸಬಹುದು, ಬೇಕಂತಲೇ ಹೇಳಿರುವ ಅವರದ್ದು ಅಕ್ಷಮ್ಯ ಅಪರಾಧ. ಹಿಂದೂ ಭಾವನೆಗಳಿಗೆ ಘಾಸಿ ಮಾಡಿ ಮತ ದಕ್ಕಿಸಿಕೊಳ್ಳಬಹುದೆಂದು ಕಾಂಗ್ರೆಸ್ ಭಾವಿಸಿದ್ದರೆ, ಕಠೋರ ಪಾಠವನ್ನು ಹಿಂದೂ ಕಲಿಸಬಲ್ಲ. ಧರ್ಮ ವಿರೋಧಿ ಕಾಂಗ್ರೆಸ್ ಮಾನಸಿಕತೆಯನ್ನು ಅದರ ನಾಯಕರು ಆಗಾಗ ಅನಾವರಣ ಮಾಡುತ್ತಿರುತ್ತಾರೆ. ಅದನ್ನು ಅರಿತು ಉತ್ತರಿಸಬೇಕಾದದ್ದು ಸ್ವಾಭಿಮಾನಿ ಹಿಂದುವಿನ ಸಹಜ ಸ್ವಭಾವವಾಗಲಿ. ಹಿಂದುಗಳ ಬಗ್ಗೆ ಅಗ್ಗದ ಮಾತನಾಡಿರುವ ಎಲ್ಲಾ ಕಾಂಗ್ರೆಸ್ಸಿಗರೂ ಮತ್ತು ಕಾಂಗ್ರೆಸ್ ಅದಕ್ಕೆ ದುಬಾರಿ ಬೆಲೆ ತೆರಲೇಬೇಕು ಎಂದಿದ್ದಾರೆ.


    ಹಿಂದೂಗಳ ಅವಮಾನ ಮಾಡಿ, ಸಮರ್ಥನೆ ಮಾಡಿಕೊಳ್ಳುವಷ್ಟು ಮಟ್ಟಿಗಿನ ದಾರ್ಷ್ಟ್ಯ:

    300x250 AD

    ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬುದಕ್ಕೆ ಉದಾಹರಣೆ. ವಿಚಾರವಾದಿ, ಪ್ರಗತಿಪರ, ಬುದ್ಧಿಜೀವಿ, ಜಾತ್ಯಾತೀತ ಹೀಗೆ ಏನೇನೋ ಆಗಲು ಹೊರಟವರೆಲ್ಲ ಹಿಂದೂ ವಿರೋಧಿ ಆಗಿರಬೇಕು ಎಂಬ ಕೆಲವರ ಮಾನಸಿಕತೆ ಅತ್ಯಂತ ದುರದೃಷ್ಟಕರ. ರಾಷ್ಟ್ರವನ್ನು ವಿಘಟಿಸುವ ದುರುಳರ ಹುನ್ನಾರ ಫಲಿಸದು. ನಿಮ್ಮ ಗುಪ್ತವಾಂಛೆಯನ್ನು ನುಚ್ಚುನೂರು ಮಾಡುವ ತಾಕತ್ತು ಹಿಂದುವಿಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top