ಯಲ್ಲಾಪುರ: ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಯಲ್ಲಾಪುರ ಇವರ ಆಶ್ರಯದಲ್ಲಿ ನ್ಯಾಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ಅಧ್ಯಕ್ಷ ಜಿ.ಬಿ.ಹಳ್ಳಾಕಾಯಿ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ಕಾನೂನು ಹಕ್ಕುಗಳ ಸಂರಕ್ಷಣೆಗೆ ಬದ್ಧವಾಗಿದೆ 1987ರಲ್ಲಿ ಕಾನೂನು ಜಾರಿಗೆ ಬಂತು 1995 ರಿಂದ ಸುಪ್ರೀಂ ಕೋರ್ಟ್ ಆದೇಶದನ್ವಯ ನವಂಬರ್ 9ರಂದು ರಾಷ್ಟ್ರೀಯ ಕಾನೂನು ಸೇವಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಜನಸಾಮಾನ್ಯರು ಕಾನೂನು ಬಗ್ಗೆ ಅರಿವು ಮಾಡಿಕೊಂಡು, ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಝಿನತ್ ಭಾನು ಶೇಕ್, ಹಿರಿಯ ವಕೀಲರಾದ ವಿ ಪಿ ಭಟ್ಟ ಕಣ್ಣಿಮನೆ, ಕೆ ಎನ್ ಹೆಗಡೆ, ಎನ್ ಆರ್ ಭಟ್ ಕೊಡ್ಲಗದ್ದೆ, ಜಿ ಎಸ್ ಭಟ್ ಹಳವಳ್ಳಿ, ಎನ್ ಟಿ ಗಾಂವ್ಕರ, ಸರ್ಕಾರಿ ವಕೀಲರು ಉಪಸ್ಥಿತರಿದ್ದರು.
ವಕೀಲರಾದ ಎನ್ ಆರ್ ಭಟ್ಟ ಬಿದ್ರೇಪಾಲ್ ಕಾನೂನು ಅರಿ ನೆರವಿನ ಮೂಲಕ ನಾಗರಿಕರ ಸಬಲಿಕರಣ, ನಾಗರಿಕ ಹಕ್ಕುಗಳ ಬಗ್ಗೆ ಮಾತನಾಡಿದರು. ಪ್ಯಾರಾ ಲೀಗಲ್ ವ್ಯಾಲೆಂಟೀಯಾರ್ ಸುಧಾಕರ ನಾಯಕ ಸ್ವಾಗತಿಸಿದರು. ಪ್ಯಾನಲ್ ವಕೀಲರಾದ ಸರಸ್ವತಿ ಭಟ್ ವಂದಿಸಿದರು.