ದಾಂಡೇಲಿ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಅವೇಡಾ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಡಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಹಾಗೂ ನಮಗೂ ಹಕ್ಕಿದೆ @75 ಅಭಿಯಾನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜೊಯಿಡಾ ತಾಲೂಕಿನ ಮೌಳಂಗಿಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ವಕೀಲರ ಸಂಘದ ಕಾರ್ಯದರ್ಶಿ ವಿಶ್ವನಾಥ ಲಕ್ಷಟ್ಟಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಅರಿವಿರಬೇಕೆಂಬ ಉದ್ದೇಶದಿಂದ ಕಾನೂನು ಅರಿವು ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಧರ್ಮರಾಜ್ ಥೋರತ್ ಅವರು ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ನಮ್ಮ ದೇಶದ ಕಾನೂನು ವ್ಯವಸ್ಥೆ ಸದೃಢವಾಗಿದೆ. ವಿಶ್ವವೆ ಕೊಂಡಾಡುವ ಕಾನೂನು ವ್ಯವಸ್ಥೆ ನಮ್ಮದಾಗಿದ್ದು, ಕಾನೂನುಗಳ ತಿಳುವಳಿಕೆಯನ್ನು ಎಲ್ಲರು ಹೊಂದಿರಬೇಕೆ0ದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಯಿನಿ ಕಾಮಾಕ್ಷಿ ಹುಲಸ್ವಾರ್, ವಕೀಲರುಗಳಾದ ಎಸ್.ಕೆ.ಮಹೇಶ್ವರಿ, ಜಯ ನಾಯ್ಕ, ರತ್ನದೀಪಾ.ಎನ್.ಎಂ, ರಜನಿ, ಆಪ್ರಿನ್ ಕಿತ್ತೂರು, ಕೋಮಲ್.ಆರ್,ಎಸ್, ಪಿ.ಎನ್.ಕುಡುಡೇಕರ, ಮೌಳಂಗಿ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ ವಿನೋದ್ ಮೈನಾಗೋಳ, ತಾನಾಜಿ ಥೋರತ್, ಸರೋಜಾ ನರವಡಿ ಹಾಗೂ ಸ್ಥಳೀಯ ಗ್ರಾ ಪಂ ಸಿಬ್ಬಂದಿಗಳು, ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.