• Slide
    Slide
    Slide
    previous arrow
    next arrow
  • ಸಮಯಕ್ಕೆ ಸರಿಯಾಗಿ ಬಾರದ ಬಸ್: ಪ್ರತಿಭಟನೆಯ ಎಚ್ಚರಿಕೆ ನೀಡಿದ ಗ್ರಾಮಸ್ಥರು

    300x250 AD

    ಶಿರಸಿ: ತಾಲೂಕಿನ ಬದನಗೋಡ ಗ್ರಾಪಂ ವ್ಯಾಪ್ತಿಯ ದಾಸನಕೊಪ್ಪ, ಸಂತೊಳ್ಳಿ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ KSRTC ಬಸ್ ಬರದಿರುವ ಪರಿಣಾಮ ವಿದ್ಯಾರ್ಥಿಗಳ ಪ್ರತಿದಿನದ ಬೆಳಗಿನ ವ್ಯಾಸಂಗ ಹಾಳಾಗುತ್ತಿದೆ. ಬೆಳಿಗ್ಗೆ ಹಾನಗಲ್ ಹಾವೇರಿ ಕಡೆಯಿಂದ ಬರುವ ಬಸ್ಸುಗಳು ಅಲ್ಲಿಂದಲೇ ಭರ್ತಿಯಾಗಿ ಬರುತ್ತಿದ್ದು, ದಾಸನಕೊಪ್ಪ ಭಾಗದ ನೂರಾರು ಶಾಲಾ ವಿದ್ಯಾ ಕಾಲೇಜು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೆಲವು ವಿದ್ಯಾರ್ಥಿಗಳು ಬಸ್ ಹೊರಗೆ ಜೋತು ಬಿದ್ದು ಪ್ರಯಾಣಿಸಿ, ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳನ್ನು ತಲುಪಲು ಹೆಣಗಾಡುತ್ತಿದ್ದಾರೆ ಸಾರ್ವಜನಿಕರು ದೂರಿದ್ದಾರೆ.

    ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರವಾಗಿ ಬೇಕಾದ ಕ್ರಮ ಕೈಗೊಂಡು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಿ ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದೆ ಶಾಲಾ-ಕಾಲೇಜು ಮಕ್ಕಳ ತೊಂದರೆ ಮುಂದುವರೆದರೆ ಮಕ್ಕಳೊಂದಿಗೆ ಪಾಲಕರು ಸೇರಿ ಪ್ರತಿಭಟನೆಗೆ ಇಳಿಯುತ್ತೇವೆ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top