Slide
Slide
Slide
previous arrow
next arrow

ಮುಂಬಯಿನಲ್ಲಿ ‘ಹಲಾಲ್ ಶೋ ಇಂಡಿಯಾ’ ರದ್ದು

300x250 AD

ಮುಂಬಯಿ: ಸಮಸ್ತ ಹಿಂದೂ ಸಂಘಟನೆಗಳ ತೀವ್ರ ವಿರೋಧದಿಂದಾಗಿ ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳನ್ನು ‘ಪ್ರಮೊಶನ್’ ಮಾಡಲು ಮುಂಬಯಿನಲ್ಲಿ ಆಯೋಜಿಸಲಾಗಿದ್ದ ‘ಹಲಾಲ್ ಶೋ ಇಂಡಿಯಾ’ವನ್ನು ಆಯೋಜಕರು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ. ಇದು ಹಿಂದೂಗಳ ಕಾನೂನುಬದ್ಧ ರೀತಿಯಲ್ಲಿ ಸಂಘಟಿತ ಪ್ರತಿರೋಧದ ವಿಜಯವಾಗಿದೆ. ಇದು ಆರಂಭವಷ್ಟೇ, ದೇಶದಲ್ಲಿ ‘ಹಲಾಲ್ ಪ್ರಮಾಣೀಕೃತ’ ವ್ಯವಸ್ಥೆಯನ್ನು ನಿಲ್ಲಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ‘ಹಲಾಲ್ ಸಕ್ತಿ ವಿರೋಧಿ ಕೃತಿ ಸಮಿತಿ’ಯ ಸಂಯೋಜಕ ಸುನೀಲ ಘನವಟ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸಮಿತಿಯ ಈ ಯಶಸ್ಸಿನ ಬಗ್ಗೆ ಘನವಟ ಇವರು ಭಾಗವಹಿಸಿದ ಎಲ್ಲಾ ಸಂಘಟನೆಗಳು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಈಶ್ವರನ ಚರಣಗಳಲ್ಲಿ ಕೃತಜ್ಞತೆ ಸಲ್ಲಿಸಿದರು.

ನವೆಂಬರ್ 12 ಮತ್ತು 13 ರಂದು ಮೆರೈನ್ ಡ್ರೈವ್‌ನ ‘ಇಸ್ಲಾಮಿಕ್ ಜಿಮಖಾನಾ’ದಲ್ಲಿ ‘ಬ್ಲಾಸಮ್ ಮೀಡಿಯಾ’ವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಹಲಾಲ್ ಪ್ರಮಾಣೀಕೃತದ ಮೂಲಕ ಪಡೆದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತಿರುವುದನ್ನು ಗಮನಕ್ಕೆ ಬಂದನಂತರ ‘ಹಲಾಲ್ ಸಕ್ತಿ ವಿರೋಧಿ ಕೃತಿ ಸಮಿತಿ’ಯು ಕಾರ್ಯಕ್ರಮವನ್ನು ತೀವ್ರವಾಗಿ ವಿರೋಧಿಸಿತು. ‘ಹಲಾಲ್ ಶೋ ಇಂಡಿಯಾ’ ಈ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ‘ಹಲಾಲ್ ಸಕ್ತಿ ವಿರೋಧಿ ಕೃತಿ ಸಮಿತಿ’ ವತಿಯಿಂದ ಮುಂಬಯಿ, ಠಾಣೆ, ರಾಯಗಢದ ವಿವಿಧೆಡೆ ಪ್ರತಿಭಟನೆಗಳನ್ನು ಹಾಗೂ ಸಭೆಗಳನ್ನು ತೆಗೆದುಕೊಳ್ಳಲಾಯಿತು. ಈ ಕಾರ್ಯಕ್ರಮ ನಡೆದರೆ ಸಮಸ್ತ ಹಿಂದೂಗಳು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಬೀದಿಗಿಳಿದು ತೀವ್ರವಾಗಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದರು. ‘ಹಲಾಲ್ ಶೋ ಇಂಡಿಯಾ’ವನ್ನು ರದ್ದುಗೊಳಿಸಲು, ‘ಹಲಾಲ್ ಸಕ್ತಿ ವಿರೋಧಿ ಕೃತಿ ಸಮಿತಿ’ ನಿಯೋಗವು ಮುಂಬಯಿನ ಪೊಲೀಸ್ ಸಹಾಯುಕ್ತ ವಿಶ್ವಾಸ ನಾಂಗರೆ-ಪಾಟೀಲ ಮತ್ತು ವಿಶೇಷ ಪೊಲೀಸ್ ವಿಭಾಗದ ಉಪಾಯುಕ್ತ ಡಾ. ಶಿವಾಜಿ ಪಾಟೀಲರನ್ನು ಭೇಟಿಯಾದರು. ಈ ವೇಳೆ ಸಮಿತಿಯು ಮುಂಬಯಿ ಪೊಲೀಸ್ ಆಯುಕ್ತರಿಗೆ ಮನವಿ ನೀಡಿ ಹಲಾಲ್ ಪ್ರಮಾಣಪತ್ರದಿಂದ ಪಡೆದ ಹಣವನ್ನು ಎಲ್ಲಿ ಬಳಸಲಾಗುತ್ತಿದೆ ಎಂಬುದರ ಕುರಿತು ವಿವರವಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್ ಮೊದಲಾದ ದೇಶಗಳಲ್ಲಿ ಹಲಾಲ್ ಪ್ರಮಾಣಪತ್ರ ಹಾಗೂ ಹಲಾಲ್ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತಿರುವುದು ಬಹಿರಂಗವಾಗಿದೆ. ಅದೇ ರೀತಿ, ಭಾರತದಲ್ಲಿ ಹಲಾಲ್ ಪ್ರಮಾಣಪತ್ರವನ್ನು ನೀಡುವ ‘ಜಮಿಯತ್ ಉಲೇಮಾ-ಎ-ಹಿಂದ್ ಹಲಾಲ್ ಟ್ರಸ್ಟ್’ ಮುಂಬಯಿನಲ್ಲಿ ‘26/11’ರ ಬಾಂಬ್ ಸ್ಫೋಟ, ಜವೇರಿ ಬಜಾರ್‌ನಲ್ಲಿನ ಸರಣಿ ಬಾಂಬ್‌ಸ್ಫೋಟ, ದೆಹಲಿಯ ಜಾಮಾ ಮಸೀದಿಯಲ್ಲಿ ಬಾಂಬ್‌ಸ್ಫೋಟ, ಪುಣೆಯಲ್ಲಿನ ಜರ್ಮನ್ ಬೇಕರಿ ಬಾಂಬ್‌ಸ್ಫೋಟ, 2006 ರ ಮಾಲೆಗಾಂವ್ ಬಾಂಬ್‌ಸ್ಫೋಟ, ಅಹಮದಾಬಾದ್ ಬಾಂಬ್‌ಸ್ಫೋಟ ಇತ್ಯಾದಿ ಹಲವು ಭಯೋತ್ಪಾದಕ ಚಟುವಟಿಕೆಗಳ ಆರೋಪಿಗಳಿಗೆ ಕಾನೂನು ನೆರವು ನೀಡುತ್ತಿರುವುದು ಬಹಿರಂಗವಾಗಿದೆ. ಇದರಲ್ಲಿ ವಿವಿಧ ಭಯೋತ್ಪಾದಕ ಸಂಘಟನೆಗಳಾದ ‘ಲಷ್ಕರ್-ಎ-ತೊಯ್ಬಾ’, ‘ಇಂಡಿಯನ್ ಮುಜಾಹಿದ್ದೀನ್’, ‘ಇಸ್ಲಾಮಿಕ್ ಸ್ಟೇಟ್’ಗೆ ಸಂಬಂಧಿಸಿದ ಸುಮಾರು 700 ಶಂಕಿತ ಆರೋಪಿಗಳ ಪ್ರಕರಣಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಭಾರತದಲ್ಲಿ ಆಹಾರ ಉತ್ಪನ್ನಗಳನ್ನು ಪ್ರಮಾಣೀಕರಿಸಲು ಕೇಂದ್ರೀಯ ಸಂಸ್ಥೆ ‘ಎಫ್‌ಎಸ್‌ಎಸ್‌ಎಐ’ ಮತ್ತು ‘ಎಫ್‌ಡಿಎ’ ಅಂದರೆ ರಾಜ್ಯ ‘ಆಹಾರ ಮತ್ತು ಔಷಧ ಆಡಳಿತ’ ಇರುವಾಗ, ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಪ್ರತ್ಯೇಕವಾದ ‘ಹಲಾಲ್ ಪ್ರಮಾಣಪತ್ರ’ ಏತಕ್ಕಾಗಿ ? ಆದ್ದರಿಂದ ‘ಹಲಾಲ್ ಉತ್ಪನ್ನ’ಗಳ ವೈಭವೀಕರಣಗೊಳಿಸುವ ಕಾರ್ಯಕ್ರಮವನ್ನು ಪೊಲೀಸ ಇಲಾಖೆ ಅನುಮತಿ ನೀಡಬಾರದು, ಎಂದು ‘ಹಲಾಲ್ ಸಕ್ತಿ ವಿರೋಧಿ ಕೃತಿ ಸಮಿತಿ’ ವತಿಯಿಂದ ಸುನೀಲ ಘನವಟ ಇವರು ಒತ್ತಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top