ಶಿರಸಿ: ಇತ್ತಿಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಗಣೇಶನಗರದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಧನ್ಯಾ ಆಚಾರಿ ಮತ್ತು ಸಾಯಿನಾಥ ಮಾಲದಕರ ಪ್ರಶಸ್ತಿ ಗಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ವಿಜಯಿಯಾಗಿ ಉತ್ತಮ ಸಾಧನೆಗೈದ ಮತ್ತು ಶ್ರಮಿಕ ವರ್ಗದಿಂದ ಬಂದ ಈ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್‌ರವರು ಅಭಿನಂದನಾ ಪುರಸ್ಕಾರ ನೀಡಿದ್ದಾರೆ. ಡಯಟ್ ಶಿರಸಿಯ ಪ್ರಾಂಶುಪಾಲರಾದ ಕಲ್ಪನಾ ಶೆಟ್ಟಿ ಮತ್ತು ಉಪಪ್ರಾಂಶುಪಾಲ ಹಾಗೂ ಇನ್‌ಸ್ಪಾಯರ್ ಅವಾರ್ಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಶಾಂತ ವೆರ್ಣೇಕರರವರು ಗಣೇಶನಗರ ಪ್ರೌಢಶಾಲೆಯಲ್ಲಿ ಸಾಧನೆಗೈದ ಈ ವಿದ್ಯಾರ್ಥಿಗಳಿಗೆ, ಮಾರ್ಗದರ್ಶಕ ಶಿಕ್ಷಕ ಕೆ.ಎಲ್.ಭಟ್ಟ ಮತ್ತು ಮುಖ್ಯಾಧ್ಯಾಪಕ ಆರ್.ಜಿ.ಪಟಗಾರರವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಈ ವಿದ್ಯಾಥಿಗಳ ಭವಿಷ್ಯ ಇನ್ನೂ ಉಜ್ವಲವಾಗಲಿ ಎಂದು ಹಾರೈಸಿದರು.
ಇನ್ಸ್ಪೈರ್ ಅವಾರ್ಡ್: ಗಣೇಶನಗರ ಪ್ರೌಢಶಾಲೆ ಅಂತಾರಾಷ್ಟ್ರೀಯ ಮಟ್ಟಕ್ಕೆ
