Slide
Slide
Slide
previous arrow
next arrow

ಅಡಿಕೆ ಕೊಯ್ಲು ಪ್ರಾರಂಭ: ಕಳ್ಳತನ ತಡೆಯಲು ಶಿರಸಿ ಪೋಲಿಸ್ ಪ್ರಕಟಣೆ ಮಾಹಿತಿ ಇಲ್ಲಿದೆ

300x250 AD

ಶಿರಸಿ: ಪ್ರಸಕ್ತ ಸಾಲಿನ ಅಡಿಕೆ ಕೊಯ್ಲು ಸಮಯ ಹತ್ತಿರವಿರುವುದರಿಂದ, ಅಡಿಕೆ ಕಳ್ಳತನವನ್ನು ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತಾಕ್ರಮವಾಗಿ, ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಸ್ಥರು ಸಂಶಯಾಸ್ಪದ ವ್ಯಕ್ತಿಗಳು ಯಾರಾದರು ಅಡಿಕೆ     ಮಾರಲು ಬಂದಾಗ ಹಾಗೂ ಸಂಶಯಾಸ್ಪದ ವ್ಯಕ್ತಿಗಳು ತೋಟಗಳಲ್ಲಿ, ಗ್ರಾಮಗಳಲ್ಲಿ ಚಲಿಸುವ ಬಗ್ಗೆ ಕಂಡು ಬಂದಲ್ಲಿ ತಕ್ಷಣ ಠಾಣೆಗೆ ತಿಳಿಸುವಂತೆ ಶಿರಸಿ‌ ಪೋಲೀಸರು ಪ್ರಕಟಣೆ ನೀಡಿದ್ದಾರೆ.

ರೈತರು ಬೆಳೆದ ಬೆಳೆಯು ಕಳ್ಳತನವಾಗದಂತೆ ಯಾವುದೇ ನಿರ್ಲಕ್ಷ್ಯ ವಹಿಸದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪೋಲೀಸರು‌ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಿಂದ  ಅಡಿಕೆ ಕಳ್ಳರ ಹಾಗೂ ಹಳ್ಳಿಗಳಲ್ಲಿ ಓಡಾಡುವ ಅಪರಿಚಿತ ವ್ಯಕ್ತಿಗಳ ಹಾಗೂ ವಾಹನಗಳ  ಬಗ್ಗೆ ನಿಗಾ ಇಟ್ಟು ವಿಶೇಷ ಗಸ್ತು ವ್ಯವಸ್ಥೆ ಮಾಡಲಾಗುವುದು. ಆದ್ದರಿಂದ ರೈತರಿಗೆ ಯಾವುದೇ ಸಂದೇಹ, ನೆರವು ಅಗತ್ಯವಿದ್ದಲ್ಲಿ ಈ ಕೆಳಗಿನ ನಂಬರ್ ಳಿಗೆ ಕರೆ ಮಾಡುವಂತೆ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.

300x250 AD

PSI ಗ್ರಾಮೀಣ: 9480805254
PSI ಬನವಾಸಿ : 9480805246
CPI ಶಿರಸಿ : 9480805238

Share This
300x250 AD
300x250 AD
300x250 AD
Back to top