• first
  second
  third
  Slide
  previous arrow
  next arrow
 • ನ.7ಕ್ಕೆ ‘ಶಿರಸಿ ತಾಲೂಕಿನಲ್ಲಿ ದಶಕದೀಚೆಯ ಗದ್ಯ-ಪದ್ಯಗಳ ಅವಲೋಕನ’ ಕಾರ್ಯಕ್ರಮ

  300x250 AD

  ಶಿರಸಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ, ಶಿರಸಿ ತಾಲೂಕ ಘಟಕದ ಆಶ್ರಯದಲ್ಲಿ ‘ಶಿರಸಿ ತಾಲೂಕಿನಲ್ಲಿ ದಶಕದೀಚೆಯ ಗದ್ಯ-ಪದ್ಯಗಳ ಅವಲೋಕನ’ ಕಾರ್ಯಕ್ರಮವನ್ನು ನ.7 ಸೋಮವಾರ ಸಂಜೆ 4 ಗಂಟೆಗೆ ನಗರದ ನೆಮ್ಮದಿ ಕುಟೀರದಲ್ಲಿ ಆಯೋಜಿಸಲಾಗಿದೆ.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಶಿರಸಿ ತಾಲೂಕಾ ಅಧ್ಯಕ್ಷ ಜಿ ಸುಬ್ರಾಯ್ ಭಟ್ ಬಕ್ಕಳ ವಹಿಸಲಿದ್ದು, ಹಿರಿಯ‌ ಲೇಖಕ, ಕೇಂದ್ರ ಸಾಹಿತ್ಯ‌ ಅಕಾಡೆಮಿ ಪುರಸ್ಕೃತ ಧರಣೀಂದ್ರ ಕುರಕುರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಭಾಗೀರಥಿ ಹೆಗಡೆ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ‌ ಕಲಾವಿದ ಗುಡ್ಡಪ್ಪ ಜೋಗಿ ಇವರುಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
  ಹಿರಿಯ ವಿಮರ್ಶಕರು ಆರ್. ಡಿ. ಹೆಗಡೆ ಆಲ್ಮನೆ ಹಾಗೂ ಕವಿಗಳಾದ ಗಣೇಶ ಹೊಸ್ಮನೆ ಇವರಿಂದ‌ ಉಪನ್ಯಾಸ ಕಾರ್ಯಕ್ರಮವಿದ್ದು ಹಾಗೆಯೇ ಆಯ್ದ ಕವಿ-ಕವಯತ್ರಿಯರಿಂದ‌ ಕವಿಗೋಷ್ಠಿ‌ ನಡೆಯಲಿದೆ.
  ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Back to top