Slide
Slide
Slide
previous arrow
next arrow

ಮಾರಿಕಾಂಬಾ ಪ್ರೌಢಶಾಲೆ ವಿದ್ಯಾರ್ಥಿಗಳ ಆಯ್ಕೆ

300x250 AD

ಶಿರಸಿ: ಹದಿನಾಲ್ಕರಿಂದ ಹದಿನೇಳು ವಯೋಮಾನದೊಳಗಿನ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಮಾರಿಕಾಂಬ ಸರ್ಕಾರಿ ಪ್ರೌಢಶಾಲೆ ಶಾಲಾ ವಿದ್ಯಾರ್ಥಿಗಳು ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಮಾರಿಕಾಂಬಾ ಪ್ರೌಢಶಾಲೆಯ ಬಾಲಕಿಯರ ಹಾಗೂ ಬಾಲಕರ ಎರಡೂ ತಂಡಗಳು ಬೆಳಗಾವಿ ತಂಡವನ್ನು ಸೋಲಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕಿಯರ ವಿಭಾಗದಲ್ಲಿ ರಕ್ಷಾ ಹೆಗಡೆ, ನೇಹಾ ನಾಯ್ಕ, ಶರಣ್ಯಾ ಹೆಗಡೆ, ಅಚಲಾ ನಾಯ್ಕ ಪ್ರಥಮ ಸ್ಥಾನ ಪಡೆದು ಈ ಸಾಧನೆ ಮಾಡಿದ್ದಾರೆ.
ಹದಿನಾಲ್ಕು ವರ್ಷದೊಳಗಿನ ಸ್ಪರ್ಧೆಯಲ್ಲಿ ಕೂಡ ಬಾಲಕರ ಶಟ್ಲ ಬ್ಯಾಡ್ಮಿಂಟನ್ ವಿಭಾಗದಲ್ಲಿ ದಿಗಂತ್ ಹೆಗಡೆ ಬೆಳಗಾವಿ ವಿದ್ಯಾರ್ಥಿ ಸೋಲಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರೂ ಆದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪಾಧ್ಯಕ್ಷ ಆರ್.ಡಿ.ಹೆಗಡೆ ಹಾಗೂ ಸದಸ್ಯರು, ಡಿಡಿಪಿಐ ಬಸವರಾಜ, ಬಿಇಓ ಎಂ.ಎಸ್.ಹೆಗಡೆ ಹಾಗೂ ಪ್ರಭಾರೆ ಉಪಪ್ರಚಾರ್ಯ ರಾಜೇಶ್ ನಾಯ್ಕ, ದೈಹಿಕ ಶಿಕ್ಷಕರಾದ ಉದಯ ಶಿರಹಟ್ಟಿ, ಎಪಿ ಶ್ರೀನಿವಾಸ್, ಯಮುನಾ ನಾಯಕ್ ಮತ್ತು ಶಿಕ್ಷಕರ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top