ಸಿದ್ದಾಪುರ: ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ತ್ಯಾಗಲಿ, ಹವ್ಯಕ ಹಾಡು ವಾಟ್ಸಾಪ್ ಗ್ರೂಪ್ ಸಂಯುಕ್ತವಾಗಿ ಹವ್ಯಕ ಸಂಸ್ಕೃತಿಯ ಅನಾವರಣಗೊಳಿಸಲು ‘ಹಾಡು-ಹಬ್ಬ’ ಕಾರ್ಯಕ್ರಮವನ್ನು ನ.6, ರವಿವಾರ ಬೆಳಿಗ್ಗೆ 9.30 ರಿಂದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನ ತ್ಯಾಗಲಿಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಹಿರಿಯ ಸಾಮಾಜಿಕ ಕಾರ್ಯಕರ್ತ ಗೋಪಾಲ್ ಹೆಗಡೆ ಹುಲಿಮನೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ತ್ಯಾಗಲಿ ದೇವಸ್ಥಾನದ ಮೊಕ್ತೇಸರ ವೆಂಕಟ್ರಮಣ ಹೆಗಡೆ ಶಿಂಗು ಹಾಗು ಹವ್ಯಕ ಹಾಡು ಗ್ರೂಪ್ ಸಂಚಾಲಕ ಶ್ರೀಕಾಂತ್ ಹೆಗಡೆ ಪೇಟೆಸರ ಗೌರವ ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಮತಿ ಸರಸ್ವತಿ ಮೋಹನ್ ಹೆಗಡೆ ಕವಲಕೊಪ್ಪ ಬರೆದಿರುವ ಹವ್ಯಕ ಹಾಡುಗಳ ಭಕ್ತಿ ಸುಧಾ ಪುಸ್ತಕವನ್ನು ಹಿರಿಯ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಗಂಗಾ ಹೆಗಡೆ ಕಾನಸೂರು ಲೋಕಾರ್ಪಣೆಗೊಳಿಸಲಿದ್ದಾರೆ. ಹಾಗೆಯೇ ಹಾಡುಗಳನ್ನು ಸುಮಧುರ ಕಂಠ ಸಿರಿಯಲ್ಲಿ ಹಾಡುತ್ತಾ ಹವ್ಯಕ ಹಾಡುಗಳನ್ನು ಉಳಿಸಿ ಬೆಳೆಸುತ್ತಿರುವ ಶ್ರೀಮತಿ ನರ್ಮದಾ ಭಟ್ ಹಿರಿಕೈ, ಶ್ರೀಮತಿ ತಾರಾ ಹೆಗಡೆ ಉಳ್ಳಾನೆ, ಬಿದ್ರಕಾನ್ ಇವರಿಗೆ ಗೌರವ ಸನ್ಮಾನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.