Slide
Slide
Slide
previous arrow
next arrow

ಅಯ್ಯಪ್ಪ ದೇವಾಲಯದಲ್ಲಿ ‘ಭಕ್ತಿ ಸಂಗೀತ’ ಕಾರ್ಯಕ್ರಮ ಯಶಸ್ವಿ

300x250 AD

ಶಿರಸಿ: ಕಾರ್ತಿಕ ಸಂಜೆ ನಿಮಿತ್ತ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನ.04, ಶುಕ್ರವಾರ ‘ಭಕ್ತಿ ಸಂಗೀತ’ ಕಾರ್ಯಕ್ರಮ ನೆರವೇರಿತು. ಶಾಂತಾ ನಾಯಕ ದಂಪತಿಗಳು ಪ್ರಾಯೋಜಿಸಿದ್ದ ಕಾರ್ಯಕ್ರಮವನ್ನು ಪ್ರಜ್ವಲ ಟ್ರಸ್ಟ್ , ಶಿರಸಿ ಇವರು ಬಹಳ‌ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದು, ಕಾರ್ಯಕ್ರಮದಲ್ಲಿ ಭವ್ಯಾ ಭಟ್ಟ ಸಂಗಡಿಗರು ಭಕ್ತಿ ಸಂಗೀತವನ್ನು ಪ್ರಸ್ತುತ ಪಡಿಸಿದರು. ಸುಂದರವಾದ ಭಕ್ತಿ ಪೂರ್ವಕ ಹಾಡುಗಳಿಗೆ ಸುಬ್ಬಣ್ಣ ಮಂಗ್ಳೂರ್ ಅವರು ಅಷ್ಟೇ ಸಮರ್ಥವಾಗಿ ತಬಲಾ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಅಯ್ಯಪ್ಪ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಸುಮಾ ಹೆಗಡೆ ನಿರ್ವಹಿಸಿ, ವಂದಿಸಿದರು. ಕಾರ್ತೀಕ ದೀಪೋತ್ಸವದ ಜೊತೆ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

300x250 AD
Share This
300x250 AD
300x250 AD
300x250 AD
Back to top