• Slide
  Slide
  Slide
  previous arrow
  next arrow
 • ಅರಿಫ್ ಮಮ್ಮದ್ ಖಾನ್ ಯಿಂದ ರಾಷ್ಟ್ರಪತಿಗೆ ಪತ್ರ

  300x250 AD

  ಕೇರಳ : ಕೇರಳದ ರಾಜ್ಯಪಾಲ ಅರಿಫ್ ಮಮ್ಮದ್ ಖಾನ್ ಅವರು ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರ ವಿರುದ್ಧ ಅಧಿಕೃತ ವಿದೇಶ ಪ್ರವಾಸದ ಕುರಿತು ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ ಎಂದು ರಾಜಭವನದ ಮೂಲಗಳು ಹೇಳಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

  ಸಿಎಂ ಮತ್ತು ಇತರ ಸಚಿವರ ಅಧಿಕೃತ ವಿದೇಶ ಪ್ರವಾಸದ ಬಗ್ಗೆ, ರಾಜಭವನಕ್ಕೆ ಯಾವುದೇ ಸಂವಹನ ಮಾಡಿಲ್ಲ ಎಂದು ರಾಜ್ಯ ರು ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಸಿಎಂ ಅನುಪಸ್ಥಿತಿಯಲ್ಲಿ ಅಧಿಕೃತ ಉಸ್ತುವಾರಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

  ಅಕ್ಟೋಬರ್ 4 ರಿಂದ 14 ರವರೆಗೆ 10 ದಿನಗಳ ಕಾಲ ಸಿಎಂ ಪಿಣರಾಯಿ ವಿಜಯನ್ ಮತ್ತು ಇತರ ಸಚಿವರು ವಿದೇಶ ಪ್ರವಾಸದಲ್ಲಿದ್ದರು ಎನ್ನಲಾಗಿದೆ.

  300x250 AD

  ಇದೇ ವೇಳೆ ಇಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಸಭೆ ನಡೆಯಲಿದ್ದು, ಕೇರಳದ ಆಡಳಿತಾರೂಢ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಮಸ್ಯೆಗಳು ಪ್ರಮುಖ ಚರ್ಚೆಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.

  ರಾಜ್ಯಪಾಲ ಖಾನ್ ಅವರು ಗುರುವಾರ ಸಿಎಂ ವಿಜಯನ್ ಅವರ ರಾಜಕೀಯ ಹಸ್ತಕ್ಷೇಪದ ಒಂದು ಉದಾಹರಣೆ ತೋರಿಸಲಿ, ಒಂದು ವೇಳೆ ಸಿಎಂ ಅಂತಹ ಉದಾಹರಣೆ ತೋರಿಸಿದರೆ ರಾಜೀನಾಮೆ ನೀಡಲು ಸಿದ್ದ ಎಂದು ಎಂದು ಬಹಿರಂಗ ಸವಾಲು ಹಾಕಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top