ಕಾರವಾರ: ಮಗನಿಗೆ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುತ್ತೇನೆಂದು ನಂಬಿಸಿ ಮಹಿಳೆಯೋರ್ವರಿಗೆ 35 ಸಾವಿರ ರೂ. ವಂಚಿಸಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಸಿದ್ದರದ ವಿನಾಯಕ ಮಹಾಲೆ ವಂಚನೆ ಮಾಡಿದ ವ್ಯಕ್ತಿಯಾಗಿದ್ದಾನೆ. ಈತ ಕಡವಾಡದ ಹೇಮಲತಾ ಕೊಠಾರಕರ ಅವರಿಗೆ ಎರಡು ವರ್ಷದ ಹಿಂದೆ ತಾನು ಭಾರತೀಯ ಸೇನೆಯಲ್ಲಿದ್ದೇನೆ ಎಂದು ಪರಿಚಯಿಸಿಕೊಂಡಿದ್ದನು. ಹೇಮಲತಾ ಅವರ ಮಗನಿಗೆ ನೌಕಾನೆಲೆಯಲ್ಲಿ ಜವಾನ್ ಕೆಲಸ ಕೊಡಿಸಿವುದಾಗಿ ನಂಬಿಸಿ, ಅ.10ರಂದು 35 ಸಾವಿರ ಪಡೆದು ಈವರೆಗೆ ಉದ್ಯೋಗವನ್ನೂ ಕೊಡಿಸದೇ, ಅತ್ತ ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ
