• Slide
    Slide
    Slide
    previous arrow
    next arrow
  • ಬಿಜೆಪಿ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ತುಚ್ಛವಾಗಿ ಕಾಣುತ್ತಿದೆ :ಕೆ.ಶಂಭು ಶೆಟ್ಟಿ

    300x250 AD

    ಕಾರವಾರ: ಸರಕಾರದ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಬೆಂಗಳೂರಿನ ದೊಡ್ಡ ಗಣಪತಿ ಮತ್ತು ಸಮೂಹ ದೇವಸ್ಥಾನಗಳಲ್ಲಿ ವಿವಿಧ ಸೇವೆಗಳ ಸ್ಥಳ ಹರಾಜಿನಲ್ಲಿ ಚಪ್ಪಲಿ ಕಾಯುವ ಸ್ಥಳದ ಹಕ್ಕನ್ನು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟು, ಉಳಿದ ಇತರ ಸೇವೆಗಳ ಸ್ಥಳದ ಹರಾಜನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟ ಸರಕಾರದ ಕ್ರಮ ಬಿಜೆಪಿ ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಎಷ್ಟು ತುಚ್ಛವಾಗಿ ಕಾಣುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಕೆ.ಶಂಭು ಶೆಟ್ಟಿ ಟೀಕಿಸಿದ್ದಾರೆ.
    ದೇವಸ್ಥಾನದ ಆವರಣದಲ್ಲಿ ಪೂಜಾ ಸಾಮಗ್ರಿ, ಎಳನೀರು ಮಾರಾಟ, ಕರ ವಸೂಲಿ ಮುಂತಾದ ಹಕ್ಕನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಚಪ್ಪಲಿ ಕಾಯುವ ಸ್ಥಳದ ಹಕ್ಕನ್ನು ಮಾತ್ರ ದಲಿತ ವರ್ಗಕ್ಕೆ ಮೀಸಲಿಟ್ಟಿದೆ. ತಲತಲಾಂತರದಿಂದ ದಲಿತ ವರ್ಗವನ್ನು ತುಳಿಯುತ್ತಾ ಬಂದಿರುವ ಬಲಿತರು, ಅದರಲ್ಲೂ ಬಿಜೆಪಿ ಪಕ್ಷ ಎಂದಿಗೂ ತನ್ನ ಧೋರಣೆಯಲ್ಲಿ ಬದಲಾಗುವುದಿಲ್ಲ ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿಯಾಗಿದೆ. ಕೇವಲ ಅಧಿಕಾರ ಗಿಟ್ಟಿಸಲು ದಲಿತ ಸಮುದಾಯಗಳನ್ನು ಕಪಟ ನಾಟಕಗಳಿಂದ ಮರುಳು ಮಾಡುವ ಬಿಜೆಪಿ ಪಕ್ಷ, ನಿಜ ಜೀವನದಲ್ಲಿ ಯಾವತ್ತೂ ದಲಿತರಿಗೆ ಸಮಾನತೆ ನೀಡುವುದಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ಅಂಬೇಡ್ಕರ್ ನೀಡಿದ ಸಂವಿಧಾನದ ಸಮಾನತೆಯ ಹಕ್ಕನ್ನು ಶೋಷಿತ ದಲಿತ ಸಮಾಜಕ್ಕೆ ಅನಿವಾರ್ಯವಾಗಿ ನೀಡುವ ಸಂದರ್ಭದಲ್ಲಿಯೂ ಬಿಜೆಪಿ ಪಕ್ಷ ಒಲ್ಲದ ಮನಸ್ಸಿನಿಂದ ಕಪಟ ಮುಖವಾಡ ಧರಿಸಿ ನಾಟಕ ಮಾಡುತ್ತಿದೆ ಎಂದಿದ್ದಾರೆ.
    ಇನ್ನೇನು ಚುನಾವಣೆ ಹತ್ತಿರವಾದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಇಲ್ಲಸಲ್ಲದ ಆಮಿಷ ಒಡ್ಡಿ ತಾವು ಈ ಸಮಾಜದ ಅಭಿವೃದ್ಧಿಗಾಗಿಯೇ ಜನ್ಮ ತಾಳಿದವರು ಎಂದು ಭಾಷಣ ಬಿಗಿಯುವ ಬಿಜೆಪಿ ನಾಯಕರು ಸಮಯ ಸಿಕ್ಕಾಗೆಲ್ಲ ನಿಜ ಬುದ್ಧಿ ತೋರಿಸುತ್ತಾ ಬಂದಿದ್ದಾರೆ. ಆದ್ದರಿಂದ ನಾಡಿನ ಅದರಲ್ಲೂ ಬಿಜೆಪಿ ಪಕ್ಷದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಾಂಧವರು ಬಿಜೆಪಿ ಪಕ್ಷವನ್ನು ಬೆಂಬಲಿಸುವಾಗ ತಾವು ನಡೆದು ಬಂದ ದಾರಿ ಹಾಗೂ ಇದೀಗ ಬಿಜೆಪಿ ನಾಯಕರು ತಮ್ಮ ಸಮಾಜವನ್ನು ತುಳಿಯುತ್ತಿರುವ ನೀತಿಯನ್ನು ಪರಿಗಣಿಸಿ ಮುಂದಾದರೂ ಈ ಪಕ್ಷವನ್ನು ವಿರೋಧಿಸುವ ಯೋಗ್ಯ ತೀರ್ಮಾನ ತೆಗೆದುಕೊಳ್ಳುವಂತೆ ಕರೆ ಕೊಟ್ಟಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top