ಕಾರವಾರ: ಶಿರಸಿ ಜೆ.ಎಮ್.ಜೆ. ಹೆಣ್ಣು ಮಕ್ಕಳ ವಸತಿ ನಿಲಯ, ಉದಯ ನಕ್ಷತ್ರ ಗಂಡು ಮಕ್ಕಳ ವಸತಿ ನಿಲಯ, ಮುಂಡಗೋಡ ಲೋಯೋಲಾ ಗಂಡು ಮಕ್ಕಳ ವಸತಿ ನಿಲಯ, ಲೋಯೋಲಾ ಹೆಣ್ಣು ಮಕ್ಕಳ ವಸತಿ ನಿಲಯ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಬಾಲನ್ಯಾಯ ಕಾಯಿದೆ ಕಲಂ:2/14ರಡಿ ಮಕ್ಕಳ ಪಾಲನಾ ಸಂಸ್ಥೆಗಳಿಂದ ಔಪಚಾರಿಕ ಶಿಕ್ಷಣ ಪಡೆಯಲು ನೋಂದಣಿ ಮಾಡಿಕೊಂಡಿದ್ದಲ್ಲಿ ಸಂಸ್ಥೆಯವರು ಮಕ್ಕಳ ಮಾಹಿತಿಯನ್ನು ಹಾಗೂ ಮಗುವನ್ನು ಕಡ್ಡಾಯವಾಗಿ ಶಿರಸಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಹಾಜರುಪಡಿಸಿ ಮತ್ತು ಕಾರವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿಯನ್ನು ಸಲ್ಲಿಸಬೇಕು. ಅಂತಹ ಮಕ್ಕಳು ಇದ್ದಲ್ಲಿ ಅವರ ಪುನರ್ ವಸತಿಗಾಗಿ ಕ್ರಮಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ -1 ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.