• first
  second
  third
  Slide
  previous arrow
  next arrow
 • ಬಿಳೂರಿನಲ್ಲಿ ಸೈಬರ್ ಅಪರಾಧದ ಕುರಿತು ಜಾಗೃತಿ ಕಾರ್ಯಕ್ರಮ

  300x250 AD

  ಶಿರಸಿ: ತಾಲೂಕಿನ ಬಿಳೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾದ ಸೈಬರ್ ಅಪರಾಧ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
  ತಾಲೂಕಿನ ಬನವಾಸಿ ಠಾಣೆಯ ಪೊಲೀಸ್ ಸಿಬ್ಬಂದಿ ಜಗದೀಶ್ ಕೆ. ಮತ್ತು ಪ್ರೇಮಾ ನಾಯ್ಕ ಸವಿಸ್ತಾರವಾಗಿ ಸೈಬರ್ ಅಪರಾಧದ ವಿವಿಧ ಆಯಾಮಗಳನ್ನು ಮಕ್ಕಳಿಗೆ ತಿಳಿಸಿದರು. ಆಧುನಿಕ ತಂತ್ರಜ್ಞಾನದ ಉಪಯೋಗದ ಜೊತೆ ಜೊತೆಗೆ ಆಗುತ್ತಿರುವ ಅನೇಕ ರೀತಿಯ ಅನಾಹುತದ ಕುರಿತು ಹಲವಾರು ಉದಾಹರಣೆಗಳ ಮೂಲಕ ವಿವರಿಸಿ, ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗರಾಜ ಗಾಂವ್ಕರ್, ಈ ಕಾರ್ಯಕ್ರಮ ನಮ್ಮ ಯುವಜನಾಂಗಕ್ಕೆ ಅತ್ಯಂತ ಉಪಯುಕ್ತವಾಗಿದೆ. ಶಿಕ್ಷಣವೆಂದರೆ ಕೇವಲ ಅಂಕಗಳಿಕೆಯಲ್ಲ, ಅದು ನೈತಿಕ ಮೌಲ್ಯಗಳ ಮೂಲಕ ದೇಶದ ಉತ್ತಮ ಪ್ರಜೆಗಳನ್ನು ರೂಪಿಸುವುದೂ ಆಗಿದೆ ಎಂಬುದು ಇಂದು ಮಕ್ಕಳಿಗೆ ತಿಳಿಸಲು ಸಾಧ್ಯವಾಗಿದೆ ಎಂದರು.
  ರಾಜ್ಯಶಾಸ್ತ್ರ ಉಪನ್ಯಾಸಕ ಉಮೇಶ್ ನಾಯ್ಕ ಕಾರ್ಯಕ್ರಮದ ನಿರೂಪಣೆಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಶ್ರೀಕೃಷ್ಣ ಹೆಗಡೆ ವಂದಿಸಿದರು.

  300x250 AD
  Share This
  300x250 AD
  300x250 AD
  300x250 AD
  Back to top