ಟೆಲ್ ಅವೀವ್: ಇಸ್ರೇಲ್‌ನ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮತ್ತೆ ಅಧಿಕಾರಕ್ಕೆ ಹಿಂದಿರುಗಿದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಅವರ ಲಿಕುಡ್ ಪಕ್ಷ ಮತ್ತು ಅದರ ಬಲಪಂಥೀಯ ಮತ್ತು ಧಾರ್ಮಿಕ ಮಿತ್ರಪಕ್ಷಗಳು ವಿಜಯಶಾಲಿಯಾಗಿ ಹೊರಹೊಮ್ಮಿದ ಕಾರಣ ಅವರು ಅಧಿಕಾರಕ್ಕೆ ಅಭೂತಪೂರ್ವ ಪುನರಾಗಮನವನ್ನು ಮಾಡಿದ್ದಾರೆ.
ನಿನ್ನೆ ಬಿಡುಗಡೆಯಾದ ಅಂತಿಮ ಫಲಿತಾಂಶಗಳ ಪ್ರಕಾರ, ಒಕ್ಕೂಟವು ನಾಲ್ಕು ವರ್ಷಗಳಲ್ಲಿ ನಡೆದ ದೇಶದ ಐದನೇ ಚುನಾವಣೆಯಲ್ಲಿ 120 ಸಂಸತ್ತು ಸ್ಥಾನಗಳ ಪೈಕಿ 64 ಅನ್ನು ಗೆದ್ದಿದೆ.
73 ವರ್ಷ ವಯಸ್ಸಿನ ಬೆಂಜಮಿನ್ ನೆತನ್ಯಾಹು ಅವರು 15 ವರ್ಷಗಳ ಅವಧಿಯಲ್ಲಿ ಐದು ಬಾರಿ ಚುನಾಯಿತರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಯಾಗಿದ್ದಾರೆ.
ನೆತನ್ಯಾಹು ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.