• Slide
    Slide
    Slide
    previous arrow
    next arrow
  • ವೇದಿಕೆಯಲ್ಲೇ ಕವನ ರಚಿಸಿ ವಾಚಿಸಿದ ಉಪವಿಬಾಧಿಕಾರಿ

    300x250 AD

    ದಾಂಡೇಲಿ: ಜಿಲ್ಲಾ ಕಸಾಪ ವತಿಯಿಂದ ರಾಜ್ಯೋತ್ಸವದ ನಿಮಿತ್ತವಾಗಿ ವಿನೂತನವಾಗಿ ಹಮ್ಮಿಕೊಂಡಿರುವ ಒಂದು ತಿಂಗಳವರೆಗೆ ನಿರಂತರವಾಗಿ ನಡೆಯಲಿರುವ ಕಾರ್ತಿಕ ಕನ್ನಡ ಅನುದಿನ-ಅನುಸ್ಪಂದನ ಕಾರ್ಯಕ್ರಮಕ್ಕೆ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಚಾಲನೆ ನೀಡಿದರು. ಅವರು ಕವಿಗೋಷ್ಟಿ ಸಂದರ್ಭ ವೇದಿಕೆಯಲ್ಲೆ ಕೂತು ಕವನವನ್ನ ಸ್ವ-ರಚಿಸಿ, ವಾಚಿಸಿ ಎಲ್ಲರ ಗಮನ ಸೆಳೆದರು.

    ಕಾರ್ಯಕ್ರಮದಲ್ಲಿ ಯಲ್ಲಾಪುರದ ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ, ಡಿವೈಎಸ್ಪಿ ಗಣೇಶ್ ಕೆ.ಎಲ್., ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ಆರ್.ಎಸ್.ಪವಾರ್, ಹಳಿಯಾಳ ತಾಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ ಪಾಲ್ಗೊಂಡಿದ್ದರು. ಮಾನಸ ವಾಸರೆ ಆಶಯಗೀತೆ ಹಾಡಿದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಮುರ್ತುಜಾ ಹುಸೇನ್ ಆನೆಹೊಸೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ವಹಿಸಿದ್ದರು.

    300x250 AD

    ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ವಂದಿಸಿದರು. ಆಶಾ ದೇಶಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಆನಂತರ ನಡೆದ ಕವಿಗೋಷ್ಟಿಯಲ್ಲಿ ನಾಗರೇಖಾ ಗಾಂವಕರ, ಪ್ರವೀಣಕುಮಾರ್ ಸುಲಾಕೆ, ದೀಪಾಲಿ ಸಾಮಂತ, ವೆಂಕಮ್ಮ ಗಾಂವಕರ, ಎನ್.ಆರ್.ನಾಯ್ಕ, ಪದ್ಮಶ್ರೀ ಜೈನ್, ಹಳಿಯಾಳದ ಕಾಳಿದಾಸ ಬಡಿಗೇರ, ಎಸ್.ಜಿ.ಕಡೇಮನಿ, ಕಲ್ಪನಾ ಹುದ್ದಾರ್, ಜೋಯಿಡಾದ ಎ.ಆರ್.ಗೌಡ, ಶಿವಾಜಿ ಚೋಮಣ್ಣವರ್, ಭೀಮಶಂಕರ ಅಜನಾಳ ಮೊದಲಾದವರು ಭಾಗವಹಿಸಿ ಸ್ವರಚಿತ ಕವನ ವಾಚಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top