Slide
Slide
Slide
previous arrow
next arrow

ಹೊನ್ನಾವರಕ್ಕೆ ಆಗಮಿಸಿದ ಕೆಂಪೇಗೌಡ ರಥ: ಪವಿತ್ರ ಮೃತ್ತಿಕೆ ಸಂಗ್ರಹ

300x250 AD

ಹೊನ್ನಾವರ: ನಾಡಪ್ರಭು ಕೆಂಪೇಗೌಡ ಅವರ ಕಂಚಿನ ಪ್ರತಿಮೆ ಆವರಣದ ಉದ್ಯಾನಕ್ಕೆ ಪವಿತ್ರ ಮೃತ್ತಿಕೆ ಸಂಗ್ರಹಿಸಲು ತಾಲೂಕಿಗೆ ಆಗಮಿಸಿರುವ ಕೆಂಪೇಗೌಡ ರಥವನ್ನು ತಾಲೂಕಾಡಳಿದಿಂದ ಪಟ್ಟಣದಲ್ಲಿ ಸ್ವಾಗತಿಸಿದರು.

ಪಟ್ಟಣದ ಮಿನಿ ವಿಧಾನ ಸೌಧದ ಎದುರು ಕೆಂಪೇಗೌಡ ರಥ ನಿಲ್ಲಿಸಿ ಪ್ರತಿಮೆ ಆವರಣದ ಉದ್ದೇಶ ಹಾಗೂ ರೂಪುರೇಷೆಗಳನ್ನೊಳಗೊಂಡ ವಿಡಿಯೋವನ್ನು ಎಲ್‌ಇಡಿ ಸ್ಕ್ರೀನ್ ಮೂಲಕ ಪ್ರದರ್ಶಿಸಲಾಯಿತು. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡ ಅವರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನ.11ರಂದು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಉದ್ಯಾನಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಪವಿತ್ರ ಮಣ್ಣು ಸಂಗ್ರಹಿಸಲಾಗುತ್ತಿದೆ. ಅಂತಯೇ ತಾಲೂಕಿನ ಕರ್ಕಿ, ಹಳದಿಪುರ, ಸಾಲ್ಕೋಡ, ಅರೇಅಂಗಡಿ, ಹೊಸಾಕುಳಿ, ಚಂದಾವರ ಭಾಗದಲ್ಲಿ ರಥ ಸಂಚರಿಸಿತು.

300x250 AD

ತಹಶೀಲ್ದಾರ್ ನಾಗರಾಜ್ ನಾಯ್ಕಡ್, ತಾ.ಪಂ ಇಒ ಸುರೇಶ ನಾಯ್ಕ, ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ವಿರುಪಾಕ್ಷಪ್ಪ ಪಾಟೀಲ್, ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಸುಧೀಶ ನಾಯ್ಕ, ತಾಲೂಕಾ ಸಂಯೋಜಕ ಬಾಲಚಂದ್ರ ನಾಯ್ಕ, ಪ.ಪಂ. ಸದಸ್ಯರು, ಬಿಜೆಪಿ ಮುಖಂಡರು ಕಂದಾಯ ಹಾಗೂ ಪ.ಪಂ. ಇಲಾಖೆಯ ಸಿಬ್ಬಂದಿ ಇದ್ದರು.

Share This
300x250 AD
300x250 AD
300x250 AD
Back to top