ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ರಂಜನಾ ಮತ್ತು ಸಂಗಡಿಗರ ಜೊತೆ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ನಾಡಗೀತೆ ಹಾಡಿದರು. ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಲೀನಾ ಎಂ.ಗೊನೇಹಳ್ಳಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಧರ ಹೆಚ್.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ರಾಜ್ಯ ಉದಯದ ಬಗ್ಗೆ, ಕನ್ನಡ ನಾಡು ಮತ್ತು ಕನ್ನಡ ಭಾಷೆಯ ಮಹತ್ವದ ಬಗ್ಗೆ ಮಾತನಾಡಿದರು.
ರಂಜನಾ ಮತ್ತು ತಂಡದವರು ಕೋಟಿ ಕಂಠ ಗಾಯನದಲ್ಲಿ ಪ್ರಸ್ತುತಪಡಿಸಿದ ಕನ್ನಡ ನಾಡು- ನುಡಿಯ ಮಹತ್ವವನ್ನು ಸಾರುವ ಸುಮಧುರ ಗೀತೆಯನ್ನು ಹಾಡಿದರು. ಸಿದ್ಧಾರ್ಥ ಕನ್ನಡ ರಾಜ್ಯೋತ್ಸವದ ಬಗ್ಗೆ ಭಾಷಣ ಮಾಡಿದನು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಪಲ್ಲವಿ ನಿರ್ವಹಿಸಿದರು. ಶಿಕ್ಷಕ ಸಂದೀಪ ನಾಯ್ಕ ಸ್ವಾಗತಿಸಿದರು. ಶಿಕ್ಷಕ ರಮೇಶ ನಾಯ್ಕ ವಂದಿಸಿದರು. ಹಿರಿಯ ಶಿಕ್ಷಕರಾದ ಎಂ.ಜಿ.ಹಿರೇಕುಡಿ, ಸಂಯೋಜಕ ಅನುರಾಧ ಗುನಗ, ಗೀತಾ ಆರ್.ನಾಯ್ಕ, ಶಿಕ್ಷಕ ವೃಂದ ಮತ್ತು ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.