• Slide
  Slide
  Slide
  previous arrow
  next arrow
 • ಜಯ ಕರ್ನಾಟಕ ಜನಪರ ವೇದಿಕೆಯಿಂದ ರಾಜ್ಯೋತ್ಸವ ಆಚರಣೆ

  300x250 AD

  ಕಾರವಾರ: 67ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಾಗೂ ಆಟೋ ಚಾಲಕರ ಮಾಲಕರ ಸಂಘದ ವತಿಯಿಂದ ನಗರದ ಸುಭಾಷ್ ಸರ್ಕಲ್ ಆಟೋ ನಿಲ್ದಾಣದಲ್ಲಿ ಆಚರಿಸಲಾಯಿತು.

  ವಿಧಾನ ಪರಿಷತ್ ಸದಸ್ಯ ಗಣಪತಿ ಡಿ.ಉಳ್ಳೇಕರ್ ಕನ್ನಡ ನಾಡಧ್ವಜವನ್ನ ಧ್ವಜಾರೋಹಣ ಮಾಡಿ ಮಾತನಾಡಿ, ನಾಡಿನ ಸಮಸ್ತ ಜನರಿಗೆ ಹಾಗೂ ಸಂಘಟನೆಯ ಕಾರ್ಯಕರ್ತರಿಗೆ, ಆಟೋ ಚಾಲಕರಿಗೆ ಕನ್ನಡದ ರಾಜ್ಯೋತ್ಸವದ ಶುಭಾಶಯಗಳನ್ನ ಕೋರಿದರು.

  ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಮಾತನಾಡಿ, ಕನ್ನಡ, ನಾಡು, ನುಡಿ, ನೆಲ, ಜಲಕ್ಕಾಗಿ ಗುಣರಂಜನ್ ಶೆಟ್ಟಿ ಅವರ ಸಾರಥ್ಯದಲ್ಲಿ ನಮ್ಮ ಸಂಘಟನೆ ಹೋರಾಟ ನಡೆಸುತ್ತಿದೆ. ಮುಂದಿನ ದಿನದಲ್ಲಿ ಗಡಿ ಜಿಲ್ಲೆಯಾದ ಕಾರವಾರದಲ್ಲಿ ಸಂಘಟನೆ ಇನ್ನಷ್ಟು ಬಲಪಡಿಸಲು, ಜೊತೆಗೆ ಕನ್ನಡ ಬೆಳವಣಿಗೆಗಾಗಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗುವುದು ಎಂದರು.

  300x250 AD

  ಇದೇ ಸಂದರ್ಭದಲ್ಲಿ ನಗರದ ಬಸ್ ಸ್ಟ್ಯಾಂಡ್ ಎದುರಿನಲ್ಲಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಹಾಗೂ ಸಂಘಟನೆಯ ಪ್ರಮುಖರಾದ ಸುಭಾಷ್ ಗುನಗಿ ಧ್ವಜಾರೋಹಣ ನಡೆಸಿ ಎಲ್ಲರಿಗೂ ರಾಜ್ಯೋತ್ಸವ ಶುಭಕೋರಿದರು.

  ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರೋಷನ್ ಹರಿಕಂತ್ರ. ರಾಜೇಶ್ ಹರಿಕಂತ್ರ, ಜಿಲ್ಲಾ ಸಂಚಾಲಕ ಗೋಪಾಲ್ ಗೌಡ, ತಾಲೂಕ ಅಧ್ಯಕ್ಷರಾದ ಮೋಹನ್ ಉಳ್ವೇಕರ್. ಸಮೀರ್, ಸಂತೋಷ್ ಪೆಡ್ನಕರ್, ಸಂತೋಷ್ ಗುನಗಿ, ಸುದೇಶ್ ನಾಯ್ಕ, ರಮಾಕಂತ ನಾಯ್ಕ ಸೇರಿದಂತೆ ಇನ್ನು ಹಲವಾರು ಸಂಘಟನೆಯ ಕಾರ್ಯಕರ್ತರು, ಆಟೋ ಚಾಲಕರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top