• Slide
    Slide
    Slide
    previous arrow
    next arrow
  • ಕನ್ನಡ ಗೀತೆಗಳ ಝೇಂಕಾರ ,ನೃತ್ಯಗಳ ಮೂಲಕ ರಾಜ್ಯೋತ್ಸವ ಆಚರಣೆ

    300x250 AD

    ಕುಮಟಾ: ಪಟ್ಟಣದ ನೆಹರು ನಗರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ರೋಟರಿ ಏನ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ಪುಟ್ಟ ಮಕ್ಕಳಲ್ಲಿ ಕನ್ನಡ ಪ್ರೇಮ ಮೂಡಿಸುವಲ್ಲಿ ಯಶಸ್ವಿಯೆನಿಸಿತು. ಕನ್ನಡಮ್ಮನ ಅಲಂಕೃತ ಭಾವಚಿತ್ರಕ್ಕೆ ಪುಷ್ಪ ನಮನ, ಕರ್ನಾಟಕದ ಭೂಪಟಕ್ಕೆ ದೀಪಾಲಂಕೃತ ಮೆರಗು, ಕನ್ನಡ ಗೀತೆಗಳ ಝೇಂಕಾರ, ಕನ್ನಡ ಬಾವುಟದ ನೃತ್ಯಗಳು ಮನಸೂರೆಗೊಂಡವು.

    ವೇದಿಕೆಯ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ, ಮಾಜಿ ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಗಜು, ಕಸಾಪ ಕಾರ್ಯಕಾರಿ ಮಂಡಳಿ ಸದಸ್ಯ ಸುರೇಶ ಭಟ್, ರೋಟರಿ ಅಧ್ಯಕ್ಷ ಚೇತನ್ ಶೇಟ್, ನಿವೃತ್ತ ಇಂಜಿನೀಯರ್ ರಾಮದಾಸ ಗುನಗಿ, ಎಸ್ಡಿಎಂಸಿ ಅಧ್ಯಕ್ಷೆ ರಮಾ ಆಚಾರಿ ರೋಟರಿ ಏನ್ಸ್ ಅಧ್ಯಕ್ಷೆ ಶೈಲಾ ಗುನಗಿ, ರೋಟರಿಯ ಸುಜಾತಾ ಕಾಮತ್, ಪವನ ಶೆಟ್ಟಿ ಮೊದಲಾದವರು ಮಕ್ಕಳಿಗೆ ನುಡಿಮುತ್ತುಗಳನ್ನಿತ್ತರು. ಶ್ರದ್ಧಾ ಪ್ರಭು ಹಾಗೂ ಮನೆಯವರು ಸಹಕರಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top