Slide
Slide
Slide
previous arrow
next arrow

ಎರಡು ಬೈಕ್’ಗಳಿಗೆ ಗುದ್ದಿದ ಕಾರು: ಬೈಕ್ ಸವಾರರಿಗೆ ಗಂಭೀರ ಗಾಯ

300x250 AD

ಮುಂಡಗೋಡ: ತಾಲೂಕಿನ ನಂದೀಪುರ ಬಳಿ ಕಾರೊಂದು ಎರಡು ಬೈಕ್‌ಗಳಿಗೆ ಡಿಕ್ಕಿಯಾಗಿರುವ ಘಟನೆ ನಡೆದಿದ್ದು, ಬೈಕ್‌ಗಳಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
ಅತಿ ವೇಗವಾಗಿ ರಾಂಗ್ ಸೈಡ್‌ನಲ್ಲಿ ಬಂದು ಎರಡು ಬೈಕ್‌ಗಳಿಗೆ ಕಾರು ಡಿಕ್ಕಿಯಾದ ಪರಿಣಾಮ ಒಂದು ಬೈಕ್‌ನಲ್ಲಿ ಈರ್ವರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೊಂದು ಬೈಕ್ ಚಾಲಕನಿಗೂ ಗಾಯಗಳಾಗಿವೆ. ಗಾಯಗೊಂಡಿದ್ದವರನ್ನು ಅದೇ ಮಾರ್ಗದಲ್ಲಿ ಬರುತ್ತಿದ್ದ ಪೊಲೀಸರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರೆನ್ನಲಾಗಿದ್ದು, ಅದರಲ್ಲಿ ಈರ್ವರು ಪುರುಷರು, ಈರ್ವರು ಯುವತಿಯರು ಇದ್ದರು. ಅಪಘಾತ ನಡೆದ ಸಂದರ್ಭದಲ್ಲಿ ಭಯಭೀತರಾಗಿ ನಾಲ್ವರೂ ಓಡಿ ಹೋಗಿದ್ದಾರೆ. ಆದರೆ ಕಾರಿನಲ್ಲಿ ಎಣ್ಣೆ ಬಾಟಲಿಗಳು, ಕಾಂಡೋಮ್ ಪ್ಯಾಕೆಟ್ಸ್ ಸಿಕ್ಕಿದ್ದು, ಕುಡಿದ ನಶೆಯಲ್ಲೇ ಅತಿ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top