ಶಿರಸಿ; ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಅರುಣೋದಯ ತರಬೇತಿ ಕೇಂದ್ರದಲ್ಲಿ ಮಾರಿಕಾಂಬ ಕರೋಕೆ ಸ್ಟುಡಿಯೋ ಮತ್ತು ಅರುಣೋದಯ ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಅರುಣೋದಯ ಸಂಸ್ಥೆಯ ಸಂಸ್ಥಾಪಕ ಸತೀಶ ನಾಯ್ಕ, ಶಿರಸಿ ಮಾರಿಕಾಂಬ ಕರೋಕೆ ಸ್ಟುಡಿಯೊದ ಮುಖ್ಯಸ್ಥರಾದ ವಿನಾಯಕ ಶೇಟ್, ಸಂತೋಷ ಶೇಟ, ರೋಷನ ಪಾವಸ್ಕರ, ಅರುಣೋದಯ ಮಹಿಳಾ ಸೌಹಾರ್ಧ ಸಹಕಾರಿಯ ಅದ್ಯಕ್ಷೆ ಜ್ಯೋತಿ ನಾಯ್ಕ, ಉಪಾದ್ಯಕ್ಷೆ ಸವಿತಾ ಮಂಡೂರ, ನಿರ್ದೇಶಕಿ ರೂಪಾ ಶೇಟ್, ಗಾಯಕಿಯರಾದ ಯಶೋದಾ ಗೌಡ, ಮಂಜುಳಾ, ಆಶಾ ಮೇಸ್ತಾ, ಸಂಪೂರ್ಣ, ಸೌಮ್ಯ, ಭಾರತಿ, ಸೌಮ್ಯ, ಕಾವ್ಯ ಹೀಗೆ ಸುಮಾರು 45 ಗಾಯಕಿಯರು ಗಾಯನದಲ್ಲಿ ಭಾಗವಹಿಸಿದ್ದರು.