• Slide
  Slide
  Slide
  previous arrow
  next arrow
 • ಪಾಕಿಸ್ಥಾನಿಗಳು ಗುಲಾಮರುʼ- ಮತ್ತೆ ಭಾರತದ ವಿದೇಶಾಂಗ ನೀತಿ ಹೊಗಳಿದ ಇಮ್ರಾನ್

  300x250 AD

  ಇಸ್ಲಾಮಾಬಾದ್: ಉಕ್ರೇನ್ ಯುದ್ಧದ ನಡುವೆಯೂ ಪಾಶ್ಚಿಮಾತ್ಯರ ಒತ್ತಡಕ್ಕೆ ಮಣಿಯದೆ ತನ್ನ ಸ್ವತಂತ್ರ ವಿದೇಶಾಂಗ ನೀತಿ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ರಷ್ಯಾದ ತೈಲವನ್ನು  ಖರೀದಿಸಿದ್ದಕ್ಕಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಮತ್ತೊಮ್ಮೆ ಭಾರತವನ್ನು ಶ್ಲಾಘಿಸಿದ್ದಾರೆ.

  ಇಮ್ರಾನ್ ಖಾನ್ ಶುಕ್ರವಾರ ಲಾಹೋರ್‌ನ ಲಿಬರ್ಟಿ ಚೌಕ್‌ನಿಂದ ಇಸ್ಲಾಮಾಬಾದ್‌ಗೆ ಹಕಿಕಿ ಆಜಾದಿ ಲಾಂಗ್ ಮಾರ್ಚ್ ಅನ್ನು ಪ್ರಾರಂಭಿಸಿದ ವೇಳೆ ಈ ಹೇಳಿಕೆಗಳನ್ನು ನೀಡಿದ್ದಾರೆ.

  “ಭಾರತವು ತನ್ನ ಇಚ್ಛೆಯಂತೆ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಆದರೆ ಪಾಕಿಸ್ತಾನಿಗಳು ತಮ್ಮ ದೇಶದ ಜನರ ಕಲ್ಯಾಣಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿ ಗುಲಾಮರಾಗಿದ್ದಾರೆ” ಎಂದು ಹೇಳಿದ್ದಾರೆ.

  “ರಾಷ್ಟ್ರದ ನಿರ್ಧಾರಗಳನ್ನು ರಾಷ್ಟ್ರದೊಳಗೆ ತೆಗೆದುಕೊಳ್ಳಬೇಕು, ರಷ್ಯಾ ಅಗ್ಗದ ತೈಲವನ್ನು ನೀಡುತ್ತಿದ್ದರೆ ಮತ್ತು ನನ್ನ ದೇಶವಾಸಿಗಳನ್ನು ಉಳಿಸಲು ನನಗೆ ಆಯ್ಕೆಯಿದ್ದರೆ, ಯಾರೂ ನಮ್ಮನ್ನು ಪ್ರಶ್ನಿಸುವಂತಿಲ್ಲ. ಯಾರೂ ನಮಗೆ ಹೇಳಲು ಸಾಧ್ಯವಿಲ್ಲ. ಭಾರತ ರಷ್ಯಾದಿಂದ ತೈಲ ಪಡೆಯಬಹುದು. ಆದರೆ ಗುಲಾಮಿ ಪಾಕಿಸ್ತಾನಿಗಳಿಗೆ ಅವಕಾಶವಿಲ್ಲ. ನಾನು ಸ್ವತಂತ್ರ ದೇಶವನ್ನು ನೋಡಲು ಬಯಸುತ್ತೇನೆ ಮತ್ತು ನ್ಯಾಯವು ಮೇಲುಗೈ ಸಾಧಿಸಬೇಕು ಮತ್ತು ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಬೇಕು” ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

  ಮೊನ್ನೆ ಲಾಹೋರ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ, ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷವು ಜೂನ್‌ನಲ್ಲಿ ನಡೆದ ಬ್ರಾಟಿಸ್ಲಾವಾ ಫೋರಮ್‌ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮಾತನಾಡಿದ್ದ ವೀಡಿಯೊ ಕ್ಲಿಪ್ ಅನ್ನು ಪ್ರದರ್ಶಿಸಿದೆ.

  300x250 AD

  “ರಷ್ಯಾದ ತೈಲವನ್ನು ಖರೀದಿಸಬೇಡಿ ಎಂದು ಭಾರತೀಯ ವಿದೇಶಾಂಗ ಸಚಿವರನ್ನು ಕೇಳಿದಾಗ, ಅವರು ಭಾರತದ ವಿದೇಶಾಂಗ ನೀತಿಯನ್ನು ನಿರ್ದೇಶಿಸಲು ಅವರು ಯಾರು ಎಂದು ಪ್ರತ್ಯುತ್ತರ ನೀಡಿದ್ದರು. ಯುರೋಪ್ ರಷ್ಯಾದ ತೈಲವನ್ನು ಖರೀದಿಸುತ್ತಿದೆ ಮತ್ತು ಜನರಿಗೆ ಅದರ ಅಗತ್ಯವಿದೆ. ನಾವು ಕೂಡ ರಷ್ಯಾ ತೈಲ ಖರೀದಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದರು.  ಸ್ವತಂತ್ರ ರಾಷ್ಟ್ರವೆಂದರೆ ಅದು” ಎಂದು ಇಮ್ರಾನ್‌ ಖಾನ್‌ ಹೇಳಿದ್ದಾರೆ.

  ರಷ್ಯಾದ ತೈಲವನ್ನು ಖರೀದಿಸದಂತೆ ಯುಎಸ್ ಒತ್ತಡಕ್ಕೆ ಮಣಿದ ಶೆಹಬಾಜ್ ಸರ್ಕಾರವನ್ನು ಅವರು ಟೀಕಿಸಿದ್ದಾರೆ.

  ಕೃಪೆ:-http://news13.in

  Share This
  300x250 AD
  300x250 AD
  300x250 AD
  Leaderboard Ad
  Back to top