ದಾಂಡೇಲಿ: ಕನ್ನಡದ ನೆಲ, ಭಾಷೆ, ಸಂಸ್ಕೃತಿಗೆ ಗೌರವ ಕೊಡುವ ನಿಟ್ಟಿನಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಆಯೋಜಿಸಲಾಯಿತು.
ಆರಂಭದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಒಟ್ಟು ಆರು ಹಾಡುಗಳನ್ನು ಸ್ಥಳೀಯ ಕಲಾವಿದರುಗಳು ಹಾಗೂ ಕಾರ್ಮಿಕ ಕಲಾವಿದರುಗಳು ಸೇರಿ ಹಾಡಿ ಗಮನ ಸೆಳೆದರು.
ರಮೇಶ ಕೆ.ಬಿಜಾಪುರ ಸ್ವಾಗತಿಸಿದ ಕಾರ್ಯಕ್ರಮಕ್ಕೆ ವಿಜಯ ಹಾರಿವಾಳ ವಂದಿಸಿದರು. ಕೃಷ್ಣ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ರಮೇಶ ವಿಜಾಪುರ, ಕಾರ್ಖಾನೆಯ ಹಿರಿಯ ಅಧಿಕಾರಿಗಳಾದ ವಿಜಯ ಮಹಾಂತೇಶ್, ಅಶೋಕ ಶರ್ಮಾ, ಎಂ.ಆರ್.ಸಿ ರಾವ್, ರವಿ ಗೌತಮ್, ಚಂದ್ರೇಶ್ ಗುಪ್ತಾ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಅಕ್ಬರ್ ಮುಲ್ಲಾ, ಕಾರ್ಮಿಕ ನಿರೀಕ್ಷಕಿ ಲಕ್ಷ್ಮಿ , ಜಂಟಿ ಸಂಧಾನ ಸಮಿತಿಯ ಸದಸ್ಯರುಗಳಾದ ಭರತ್ ಪಾಟೀಲ್, ಭವರ್ ಸಿಂಗ್, ಹನುಮಂತ ಕಾರ್ಗಿ, ಪ್ರಮೋದ್ ಕದಂ ಮೊದಲಾದವರು ಸೇರಿದಂತೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.