• Slide
    Slide
    Slide
    previous arrow
    next arrow
  • ಅ.29ಕ್ಕೆ ಹಳ್ಳಿಬೈಲ್ ಹುತ್ಗಾರಿನಲ್ಲಿ ‘ಭೀಷ್ಮ ವಿಜಯ’ ತಾಳಮದ್ದಳೆ

    300x250 AD

    ಶಿರಸಿ: ಸ್ಪಂದನ ಟ್ರಸ್ಟ್ ಹಳ್ಳಿಬೈಲ್ ಸಹಯೋಗದಲ್ಲಿ ಶ್ರೀ ವಾಗೀಶ ಕಲಾಬಳಗ ಕಲ್ಲಳ್ಳಿ ಇವರಿಂದ ತಾಲೂಕಿನ ಹಳ್ಳಿಬೈಲ್ ಹುತ್ಗಾರಿನ ಮಹಾಬಲೇಶ್ವರ ಹೆಗಡೆಯವರ ಮನೆಯಂಗಳದಲ್ಲಿ ಅ.29,ಶನಿವಾರ ಮಧ್ಯಾಹ್ನ 3ಗಂಟೆಯಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ ‘ಭೀಷ್ಮ ವಿಜಯ’ ತಾಳಮದ್ದಳೆಯನ್ನು ಆಯೋಜಿಸಲಾಗಿದೆ.

    ಹಿಮ್ಮೇಳದಲ್ಲಿ ಗಣಪತಿ ಭಟ್ ಭರತೋಟ, ಗಣಪತಿ ಹೆಗಡೆ, ಚಂದ್ರಶೇಖರ ಭಟ್ ಮನರಂಜಿಸಲಿದ್ದು, ಮುಮ್ಮೇಳದಲ್ಲಿ ಕರುಣಾಕರ ಹೆಗಡೆ, ಮಹೇಶ್ ಭಟ್, ಶ್ರೀಪಾದ ಹೆಗಡೆ, ಸುಧೀರ್ ಹೆಗಡೆ, ದಿನೇಶ್ ಹೆಗಡೆ, ಮನೋಜ ಶಾಸ್ತ್ರಿ ಕಾಣಿಸಿಕೊಳ್ಳಲಿದ್ದಾರೆ.

    300x250 AD

    ಕಾರ್ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಲು ಕಾರ್ಯಕ್ರಮದ ಸಂಯೋಜಕರಾದ ಜಿಎಸ್ ಭಟ್ ಸೂರನಜಡ್ಡಿ, ಸ್ಪಂದನ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿ, ಟ್ರಸ್ಟಿಗಳು ಸಮಸ್ತ ಗ್ರಾಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top