ಶಿರಸಿ: ಕರ್ನಾಟಕ ಸರ್ಕಾರ, ಕಂದಾಯ ಇಲಾಖೆ ನಾಢ ಕಛೇರಿ, ಹುಲೇಕಲ್,ಶ್ರೀ ಸೋದೆ ವಾದಿರಾಜ ಮಠ ಸೋಂದಾ,ಗ್ರಾಮ ಪಂಚಾಯತ್ ಸೋಂದಾ,ಸಾ ಶಿ ಇಲಾಖೆ ವಾನಳ್ಳಿ ಕ್ಲಸ್ಟರ್,ಜಾಗೃತ ವೇದಿಕೆ ಸೋಂದಾ,ಶ್ರೀ ರಾಜರಾಜೇಶ್ವರಿ ಯುವಕ ಮಂಡಳ ಸೋಂದಾ , ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು, ಶ್ರೀ ಸೋದೆ ವಾದಿರಾಜ ಮಠ,ಇವರ ಕೃಪಾಶೀರ್ವಾದ ದೊಂದಿಗೆ ಕೋಟಿ ಕಂಠ ಗೀತ ಗಾಯನ ಕಾರ್ಯಕ್ರಮವನ್ನು ಅ.28ರಂದು ಮುಂಜಾನೆ 10.58ಕ್ಕೆ ಸರಿಯಾಗಿ ಐತಿಹಾಸಿಕ ಶ್ರೀ ಸೋದೆ ವಾದಿರಾಜ ಮಠದ ಶ್ರೀ ರಮಾತ್ರಿವಿಕ್ರಮ ದೇವರ ಸನ್ನಿಧಿಯಲ್ಲಿ ತಾಯಿ ಭುವನೇಶ್ವರಿ ದೇವಿಗೆ ಗಣ್ಯರಿಂದ ಪುಷ್ಪಾರ್ಚನೆ ಗೈಯ್ಯುವುದರ ಮೂಲಕ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.
ರಥಬೀದಿಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಹುಲೇಕಲ್ ಹೋಬಳಿಯ ಆಯ್ದ 250ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು, ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಏಕಕಂಠದಲ್ಲಿ ಹಾಡಿ ನೃತ್ಯದ ಮೂಲಕ ಜನ ಮೆಚ್ಚುಗೆ ಗಳಿಸಿದರು. ಈ ಸಾಮೂಹಿಕ ನೃತ್ಯ-ಗೀತ ಗಾಯನವನ್ನು ಶಿಕ್ಷಕ ಬಂಧು ಭಗಿನೀಯರ ಸಹಕಾರದೊಂದಿಗೆ ಸಾ.ಶಿ.ಇಲಾಖೆಯ , ವಾನಳ್ಳಿ ಕ್ಲಸ್ಟರ್ ಸಿಆರ್ ಪಿ, ಡಿ.ಪಿ.ಹೆಗಡೆ ವ್ಯವಸ್ಥಿತವಾಗಿ ನಡೆಸಿಕೊಟ್ಟರು.
ನಂತರ ರಾಜಾಂಗಣದ ಸಭಾ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ಯನ್ನು ಸೋಂದಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ, ಮಮತಾ ಚಂ ಜೈನ್ ವಹಿಸಿದ್ದರು.ಸೋದೆ ವಾದಿರಾಜ ಮಠದಲ್ಲಿ ನಡೆಸಲಾದ ಈ ಐತಿಹಾಸಿಕ ಕ್ಷಣಕ್ಕೆ ದಾಖಲೆಗೆ ಸಾಕ್ಷಿಯಾಗಿ, ನಾವೆಲ್ಲ ಪಾಲ್ಗೊಂಡಿದ್ದು ಶ್ರೀಗಳ ಕೃಪಾಶೀರ್ವಾದ ಹಾಗೂ ನಮ್ಮ ಪೂರ್ವಿಕರು ಮಾಡಿದ ಪುಣ್ಯದಿಂದ ಎಂದರು. ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಿದ ಶ್ರೀ ಸೋದೆ ವಾದಿರಾಜ ಮಠ ಆಡಳಿತಾಧಿಕಾರಿಗಳು ರಾಧಾರಮಣ ಉಪಾಧ್ಯಯ ಇವರು ಶುಭ ಹಾರೈಸಿದರು. ಪ್ರಮುಖ ವಕ್ತಾರರಾಗಿ ಆಗಮಿಸಿದ, ಸೋದೆ ಮಠದ ಭಾವಿಸಮೀರ ಗುರುಕುಲ, ಪ್ರಾಂಶುಪಾಲ , ಪಾಂಡುರಂಗ ಆಚಾರ್ಯರು ಭಾರತದ ಸಂಸ್ಕೃತಿಗೆ , ಕರ್ನಾಟಕ ಸಾಂಸ್ಕೃತಿಕ ಕೊಡುಗೆಗಳು ಅಪಾರವಾಗಿವೆ.ಈ ಪ್ರದೇಶದ ಜನರ ನಡೆ-ನುಡಿ ಸುಸಂಸ್ಕೃತವಾಗಿದೆ.ಕನ್ನಡಾಂಭೆಯ ಮಡಿಲಲ್ಲಿ, ಹಿರಿಯರನ್ನು ಗೌರವಿಸುವ ಸ್ತ್ರೀಯರನ್ನು ಆದರಿಸುವ ಪರಿಪಾಠ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ,ಕಾರಣ ಪಂಪ ಹೋಯ್ಸಳರಾಳಿದ ಈ ನಾಡು ಕಲೆಗಳ ಬೀಡಾಗಿ ಸಂಸ್ಕೃತಿಯ ತವರೂರಾಗಿ , ದೇವಾನುದೇವತೆಗಳು ನಮ್ಮನ್ನು ಹಾರೈಸುತ್ತಾ ಸುಭಿಕ್ಷ ನಾಡನ್ನಾಗಿಸಿ, ಜಗತ್ತಿನಲ್ಲಿ, ವಿದ್ಯೆ -ಶಿಕ್ಷಣ -ಆಳವಾದ ಅಧ್ಯಯನದಿಂದಾಗಿ ,ಭಾರತದ ಸಂಸ್ಕೃತಿ ಜಗತ್ತಿಗೆಲ್ಲ ಮಾದರಿಯಾಗಿದೆ.
ಪುರಾಣಗಳಲ್ಲೂ ಕರ್ನಾಟಕದ ಕಲೆ ಸಂಸ್ಕೃತಿ ಬಗ್ಗೆ ಉಲ್ಲೇಖವಿದೆ.ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುವರೊಂದಿಗೆ, ಇನ್ನೊಬ್ಬರಿಗೆ ನೆರವಾಗುವ ಗುಣ, ಈ ನೆಲದ ಜನರಲ್ಲಿ ಹಾಸುಹೊಕ್ಕಾಗಿದೆ.ಈ ಗುಣವನ್ನು ನಾವು-ನೀವೆಲ್ಲ ಉಳಿಸಿ ಬೆಳೆಸಿಕೊಂಡು ಹೋಗಬೇಕು.ನೂರು ಯೋಜನೆಗಳ ದೂರ ಲಂಕೆಗೆ ಹಾರಿದ ಹನುಮ ಹುಟ್ಟಿದ್ದು ನಮ್ಮ ನೆಲದಲ್ಲಿ, ಅಂದರೆ ನಾವೆಂತ ಪುಣ್ಯವಂತರು.ಇಂತಹ ನೆಲದ ಸಂಸ್ಕೃತಿ ಉಳಿವಿಗೆ ನಮ್ಮಲ್ಲಿಯ ಅನೇಕ ರಾಜ ಮಹಾರಾಜರುಗಳ ಕೊಡುಗೆ ಅಪಾರವಾಗಿದೆ.ಅವರ ಶ್ರದ್ಧೆ -ಪರಿಶ್ರಮದಿಂದ, ಕನ್ನಡ ನಾಡು ಕಟ್ಟಿ, ಸಂಗೀತಕ್ಕೆ ಅಪಾರ ಕೊಡುಗೆ ನೀಡಿ, ಈ ನೆಲವನ್ನು ಉಳಿಸಿ ಬೆಳೆಸಿದ್ದಾರೆ,.ಅಂತಹ ನಾಡಿನ, ಹಿರಿಮೆ ಗರಿಮೆ ಯನ್ನು ನೆನೆದು,ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕಾಗಿದೆ.ಅಂತಹ ಮಹತ್ ಸಾಧನೆ ಈ ಕೋಟಿ ಕಂಠ ಗೀತ ಗಾಯನದಿಂದ ಸಾಧ್ಯವಾಗಲೀ ಎಂದರು. ಹುಲೇಕಲ್ ಗ್ರಾ ಪಂ ಅಧ್ಯಕ್ಷೆ , ತನುಜಾ ನೇತ್ರೇಕರ , ಜಾಗೃತ ವೇದಿಕೆ ಸೋಂದಾದ ಕಾರ್ಯಾಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ ರಾ,ರಾ,ಯುವಕ ಮಂಡಳ ಅಧ್ಯಕ್ಷ, ಮಹಾಬಲೇಶ್ವರ ಖಾಸಾಪಾಲ,ಸೋಂದಾ ಟಿ.ಡಿ.ಓ.ಹಾಗೂ ಡಿ.ಪಿ.ಹೆಗಡೆ, ಚಂದ್ರರಾಜ್ ಜೈನ, ಅಧ್ಯಕ್ಷ ಜೈನ ಸಮುದಾಯ ಸೋಂದಾ ವೇದಿಕೆಯಲ್ಲಿಇದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸೋಂದಾ ಉಪಾಧ್ಯಕ್ಷರು ಗಜಾನನ ಹರಿ ನಾಯ್ಕ.ಸರ್ವರನ್ನು ಸ್ವಾಗತಿಸಿದರು. ಹುಲೇಕಲ್ ನಾಡ ಕಛೇರಿಯ ಉಪ ತಹಶೀಲ್ದಾರ್ ಡಿ ಆರ್ ಬೆಳ್ಳೇಮನೆ ಪ್ರಾಸ್ತಾವಿಕ ಮಾತನಾಡಿದರು. ಆಭಾರ ಮನ್ನಣೆಯನ್ನು ರಮೇಶ ಶಾಸ್ತ್ರಿ ಸ್ವರ್ಣವಲ್ಲೀ
ಕಾರ್ಯಕ್ರಮ ನಿರೂಪಣೆಯನ್ನು ರಾಮಚಂದ್ರ ಹೆಗಡೆ ಉಳ್ಳೀಕೊಪ್ಪ ನೆರವೇರಿಸಿಕೊಟ್ಟರು
ಆಗಮಿಸಿದ ಎಲ್ಲರಿಗೂ ಶ್ರೀ ಸೋದೆ ವಾದಿರಾಜ ಮಠದಲ್ಲಿ ಭೋಜನ ವ್ಯವಸ್ಥೆಯನ್ನು ಶ್ರೀ ಮಠದಿಂದ ಮಾಡಲಾಗಿತ್ತು.