• Slide
  Slide
  Slide
  previous arrow
  next arrow
 • ಕೋಟಿ ಕಂಠಕ್ಕೆ ದನಿಯಾದ ಲಯನ್ಸ್ ಶಾಲೆ

  300x250 AD

  ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿಯವರ ಸಹಯೋಗದಲ್ಲಿ ನಾಡು ನುಡಿಯ ಬಗ್ಗೆ ಅಭಿಯಾನ ಮೂಡಿಸುವ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಕವಿಗಳು ರಚಿಸಿದ ಹಾಡುಗಳನ್ನು ಏಕಕಂಠದಲ್ಲಿ ಹಾಡುವ ಅಭಿಯಾನವನ್ನು ಅಕ್ಟೋಬರ್ 28ರಂದು ಶಿರಸಿ ಲಯನ್ಸ್ ಶಾಲಾ ಆವರಣದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

  ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲ. ಎನ್.ವಿ.ಜಿ ಭಟ್, ಉಪಾಧ್ಯಕ್ಷರಾದ ಲ. ಪ್ರಭಾಕರ ಹೆಗಡೆ, ಗೌರವ ಕಾರ್ಯದರ್ಶಿ ಲ. ಪ್ರೊ. ರವಿ ನಾಯಕ್ ಹಾಗೂ ಶಿರಸಿ ಲಯನ್ಸ್ ಕ್ಲಬ್‌ನ ಪ್ರಸ್ತುತ ಅಧ್ಯಕ್ಷರಾದ ಲ. ತ್ರಿವಿಕ್ರಮ್ ಪಟವರ್ಧನ್, ಕಾರ್ಯದರ್ಶಿ ಎಂ.ಜೆ.ಎಫ್. ಲ. ರಮಾ ಪಟವರ್ಧನ್ ಹಾಗೂ ಲಯನ್ಸ್ನ ಇನ್ನಿತರ ಸದಸ್ಯರು ಹಾಗೂ ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕರು, ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಮುಖ್ಯಾಪಾಧ್ಯಾಯ ಶಶಾಂಕ ಹೆಗಡೆಯವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

  300x250 AD

  ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ ಹೆಗಡೆಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಡುವುದರೊಂದಿಗೆ, ಶಾಲೆಯ ಸಹ ಸಿಬ್ಬಂದಿ ನವೀನ್ ಅಂಕೋಲೆಕರ್ ಹುಟ್ಟಿದರೆ ಕನ್ನಡ ನಾಡು ಹಾಡನ್ನು ಹಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ವಿಶೇಷವಾಗಿ 10 ನೇ ತರಗತಿಯ ವಿದ್ಯಾರ್ಥಿನಿಯರು, ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ನಗರದ ಎ.ಪಿ.ಎಮ್.ಸಿ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಟಿ ಕಂಠ ಗೀತ ಗಾಯನದಲ್ಲಿ ಭಾಗವಹಿಸಿದ್ದರು. ಸಹಶಿಕ್ಷಕಿ ಮುಕ್ತಾ ನಾಯ್ಕರವರು ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಚೇತನಾ ಹೆಗಡೆ ನಿರ್ವಹಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top