ಶಿರಸಿ: ಇಲ್ಲಿನ ಯಕ್ಷಗೆಜ್ಜೆ ಮಹಿಳೆಯರಿಂದ ನಗರದ ಗಾಯತ್ರಿ ಗೆಳೆಯರ ಬಳಗದ ಗಾಯತ್ರಿ ಸಭಾಭವನದಲ್ಲಿ ಅ.30 ರ ಮಧ್ಯಾಹ್ನ 3.30ರಿಂದ ಪಾರ್ತಿಸುಬ್ಬ ವಿರಚಿತ ಜಟಾಯು ಮೋಕ್ಷ ಸುಗ್ರೀವ ಸಖ್ಯ ತಾಳಮದ್ದಳೆ ನಡೆಯಲಿದೆ.
ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ, ಶ್ರೀಪಾದ ಭಟ್ಟ ಮೂಡಗಾರ ಮತ್ತು ಮುಮ್ಮೇಳದಲ್ಲಿ ನಿರ್ಮಲಾ ಹೆಗಡೆ, ಲತಾ ಗಿರಿಧರ, ಸ್ಮಿತಾ ಭಟ್ಟ, ರೇಣುಕಾ ನಾಗರಾಜ, ರೋಹಿಣಿ ಹೆಗಡೆ, ಸಂಧ್ಯಾ ಅಜಯ್, ಸಂಧ್ಯಾ ಶಾಸ್ತ್ರಿ, ಜ್ಯೋತಿ ಭಟ್ಟ , ಮಾನಸಾ ಹೆಗಡೆ ಭಾಗವಹಿಸಲಿದ್ದಾರೆ.
ಅ.30 ಕ್ಕೆ ಯಕ್ಷಗೆಜ್ಜೆ ಮಹಿಳೆಯರಿಂದ ತಾಳಮದ್ದಳೆ
