ಕುಮಟಾ: ಕುರಿಗಳನ್ನು ತುಂಬಿಕೊAಡು ಬಂದ ಬೊಲೆರೋ ವಾಹನ ಪಟ್ಟಣದ ಬಗ್ಗೋಣ ಕ್ರಾಸ್ ಬಳಿಯ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೊಲೆರೋನಲ್ಲಿದ್ದ ಏಳು ಕುರಿಗಳು ಮೃತಪಟ್ಟಿದ್ದು, ಗಾಯಗೊಂಡ ಕೆಲ ಕುರಿಗಳನ್ನು ಜನರು ಹೊತ್ತೊಯ್ದಿದ್ದಾರೆ.
ಅಂಕೋಲಾ ಕಡೆಯಿಂದ ವೇಗವಾಗಿ ಬಂದ ಬುಲೇರೊ ವಾಹನ ಪಟ್ಟಣದ ಬಗ್ಗೋಣ ಕ್ರಾಸ್ ಬಳಿಯ ಹೆದ್ದಾರಿಯ ಡಿವೈಡರ್‌ಗೆ ಗುದ್ದಿಕೊಂಡು ಅಪಘಾತ ಉಂಟಾಗಿದೆ. ಅಪಘಾತದ ರಭಸಕ್ಕೆ ಬುಲೇರೊನಲ್ಲಿದ್ದ ಸುಮಾರು ಏಳು ಕುರಿಗಳು ಮೃತಪಟ್ಟಿದ್ದು, ಇನ್ನು ಕೆಲವು ಗಾಯಗೊಂಡಿವೆ. ಸುಮಾರು 70 ಕುರಿಗಳನ್ನು ಈ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಈ ಅಪಘಾತದಲ್ಲಿ ಚಾಲಕ ಸುರಕ್ಷಿತನಾಗಿದ್ದು, ಹಿಂಭಾಗದಲ್ಲಿ ಕುಳಿತಿದ್ದ ಕುರಿಗಾಯಿಯ ಕಾಲಿಗೆ ತೀವ್ರ ಪೆಟ್ಟು ತಗಲಿದೆ. ಕುರಿ ಗಾಡಿ ಅಪಘಾತವಾಗಿದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಎಲ್ಲಿಂದಲೋ ಬಂದ ಕೆಲ ಜನರು ಗಾಯಗೊಂಡ ಮತ್ತು ಮೃತ ಕುರಿಗಳನ್ನು ಅಲ್ಲಿಂದ ಎಗರಿಸಿದ್ದಾರೆ ಎನ್ನಲಾಗಿದೆ. ಇನ್ನು ಕೆಲವು ಕುರಿಗಳು ಓಡಿಹೋಗಿದ್ದು, ಅವುಗಳು ಕೂಡ ನಾಪತ್ತೆಯಾದ ಮಾಹಿತಿ ಇದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
ಡಿವೈಡರ್‌ಗೆ ಬೊಲೆರೋ ಡಿಕ್ಕಿ; ಏಳು ಕುರಿ ಸಾವು
