Slide
Slide
Slide
previous arrow
next arrow

ನಾಟಕಕಾರ ದಯಾನಂದ ಬಿಳಗಿಗೆ ಸಾಯನ ಪ್ರಶಸ್ತಿ ಪ್ರದಾನ

300x250 AD

ಶಿರಸಿ: ವೃತ್ತಿ ರಂಗಭೂಮಿಯ ಕುಂಟಕೋಣ ಮುಖ ಜಾಣ ನಾಟಕದ ಹಾಸ್ಯ ಕಲಾವಿದರಾಗಿ ಜನರಿಗೆ ಹಾಸ್ಯದ ಮಳೆಯನ್ನೆ ಸುರಿಸುತ್ತಿರುವ ಪ್ರಸಿದ್ಧ ನಾಟಕಕಾರ ದಯಾನಂದ ಬಿಳಗಿ ಇವರಿಗೆ ಪ್ರೊ.ಎಂ.ರಮೇಶ ಸ್ಮರಣಾರ್ಥ ನೀಡಲಾಗುವ ಸಾಯನ ಪ್ರಶಸ್ತಿ- 2022 ನೀಡಿ ಗೌರವಿಸಲಾಯಿತು.
ನಯನ ಸಭಾಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ವಿ.ಅಕ್ಷರ ಹೆಗ್ಗೋಡರವರು ದಯಾನಂದ ಬಿಳಗಿ ಇವರಿಗೆ ಸಾಲು ಹೊದಿಸಿ 25 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಸನ್ಮಾನ ನೆರವೇರಿಸಿ ಮಾತನಾಡಿದ ಹೆಗ್ಗೋಡ, ವೃತ್ತಿ ಭೂಮಿಗೆ ಕರ್ನಾಟಕವನ್ನು ಒಂದುಗೂಡಿಸುವ ಶಕ್ತಿಯಿದೆ. ನಾಟಕ ಕಂಪನಿಗಳು ಊರಿಂದ ಊರಿಗೆ ಸಂಚರಿಸುತ್ತಲೇ ಹಾಸ್ಯಪೂರಿತ ಸಮಾಜಿಕ ನಾಟಕಗಳನ್ನು ಆಡಿಸುವ ಮೂಲಕ ಜನರಿಗೆ ಹತ್ತಿರವಾಗಿ ಬಿಡುತ್ತಾರೆ. ನಾಟಕ ಕಲಾವಿದರು ರಂಗಭೂಮಿಯಲ್ಲಿ ನಗೆಸುತ್ತಾರೆ. ಆದರೆ ಅವರಲ್ಲಿ ನಿಜ ಜೀವನದಲ್ಲಿ ಅಳುವವರೆ ಹೆಚ್ಚು. ಆದರೂ ತಮ್ಮಲ್ಲಿರುವ ದುಃಖ ದುಮ್ಮಾನವನ್ನು ಮರೆತು ಜನರನ್ನು ನಗೆಸುವುದೇ ಕಲಾವಿದನ ಕಲಾವಂತಿಕೆ ಎಂದು ಹೇಳಿದರು.
ನಾಟಕಕ್ಕೆ ಚಲನಚಿತ್ತಕ್ಕಿಂತ ದೊಡ್ಡ ಶಕ್ತಿಯಿದೆ. ರಂಗಭೂಮಿಯಲ್ಲಿ ಬಳಸುವ ಪ್ರಯೋಗಗಳೆನ್ನೆ ಸಿನಿಮಾ ರಂಗ ಬಳಸಿಕೊಂಡು ಇಂದು ನಾಟಕಗಿಂತ ದೊಡ್ಡದಾಗಿ ಬೆಳೆದಿದೆ. ಸಿನಿಮಕ್ಕೆ ಆಧಾರ ಸ್ತಂಬವೇ ನಾಟಕ ರಂಗಭೂಮಿ. ನಮ್ಮ ದೇಶದಲ್ಲಿ ನಾಟಕವು 1850ರಿಂದ 1900ರ ನಡುವೆ ವಿವಿಧ ಪ್ರಕಾರಗಳಲ್ಲಿ ಹುಟ್ಟಿಕೊಂಡಿತು. ನಂತರ ಕರ್ನಾಟಕದಲ್ಲಿ ಕಂಪನಿ ನಾಟಕಗಳು ಹುಟ್ಟಿಕೊಂಡಿತು. ಪಾಶ್ಚಿಮಾತ್ಯ ನಾಟಕ ಜಾಗು ಸಂಸ್ಕೃತ ನಾಟಕಕ್ಕೆ ತನ್ನದೇ ಆದ ನೆಲೆಗಟ್ಟಿನ ಇತಿಹಾಸವಿದೆ. ಆದರೆ ಕಂಪನಿ ನಾಟಕಕ್ಕೆ ದಿನಕಳೆದಂತೆ ಇವೆರಡನ್ನೂ ಮಿರಿ ತನ್ನದೇ ಆದ ಶೈಲಿಯಲ್ಲಿ ಬೆಳೆಯುತ್ತ ಸಾಗಿತು. ನಾಟಕ ರಂಗಭೂಮಿಗೆ ತನ್ನದೇ ಆದ ಶಕ್ತಿಯಿದೆ. ಆ ಶಕ್ತಿ ಗೊತ್ತಿಲ್ಲದಿರುವುದೇ ನಾಟಕ ಕಂಪನಿಗಳು ಕುಂಟುತ್ತ ಸಾಗಲು ಕಾರಣವಾಗಿ ಜೀವನೋಪಾಯದ ರಂಗಭೂನಿಯಾಗಿ ಮಾರ್ಪಾಟು ಹೊಂದಿತೆಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಸ್ಯ ಕಲಾವಿದ ದಯಾನಂದ ಬಿಳಗಿ, ನಾನು ಈ ಪ್ರಶಸ್ತಿಯನ್ನು ಪ್ತಸಾದವೆಂದು ಸ್ವೀಕರಿಸಿದ್ದೇನೆ. ಅಷ್ಟು ದೊಡ್ಡ ವ್ಯಕ್ತಿಯ ಹೆಸರಿನ ಪ್ರಶಸ್ತಿಯನ್ನು ಈ ಚಿಕ್ಕ ಕಲಾವಿದನಿಗೆ ದೊರೆತಿರುವುದು ನನ್ನ ಸೇವೆಯನ್ನು ಸಾರ್ಥಕವನ್ನಾಗಿ ಮಾಡಿದೆ. ನನ್ನ ತಾಯಿ- ತಂದೆ ನಾಟಕ ರಂಗಭೂಮಿಯಿಂದ ಬಂದವರು. ತಂದೆ ಕುಂಚ ಕಲಾವಿದರಾಗಿ ತಾಯಿ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿಯಲ್ಲಿರುವ ಕಲೆಯು ನನಗೆ ರಕ್ತಗತವಾಗಿ ಬಂದಿರುವದಾಗಿ ಬಂದಿದೆ. ಬಡತನವನ್ನು ಗೆಲ್ಲಬೇಕೆನ್ನುವ ಛಲ ನಮ್ಮನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿ ನಿಮ್ಮೆಲ್ಲರ ಪ್ರೀತಿ ಸಂಪಾದಿಸಲು ಕಾರಣವಾಯಿತೆಂದು ಹೇಳಿದರು.
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಮ್ಮದಿ ಕುಠಿರದ ವಿ.ಪಿ.ಹೆಗಡೆ (ವೈಶಾಲಿ) ವಹಿಸಿದ್ದರು. ಮಹಿಮಾ ಹೆಗಡೆ ಅಭಿನಂದನಾ ಭಾಷಣ ಮಾಡಿದರು. ಸಾಯನ ಪ್ರಶಸ್ತಿ ಸಮಿತಿಯ ವಿಜಯ ನಳನಿ ರಮೇಶ ಉಪಸ್ಥಿತರಿದ್ದರು. ಸಿಂಧು ಹೆಗಡೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

300x250 AD
Share This
300x250 AD
300x250 AD
300x250 AD
Back to top