ನವದೆಹಲಿ: ಮೈ ಕೊರೆಯುವ ಚಳಿಯ ಕಾರ್ಗಿಲ್ ಪ್ರದೇಶದಲ್ಲಿ ದೇಶ ಕಾಯುವ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಕಿನ ಹಬ್ಬ ದೀಪಾವಳಿ ಆಚರಿಸಿ ಗಮನ ಸೆಳೆದರು. 2014ರಲ್ಲಿ ಪ್ರಧಾನ ಮಂತ್ರಿ ಪಟ್ಟಕೇರಿದ ದಿನದಿಂದಲೂ ಪ್ರತಿ ವರ್ಷ ದೇಶ ಕಾಯುವ ವೀರ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.
ಈಗಾಗಲೆ ಹಲವಾರು ಮಿಲಿಟರಿ ಕೇಂದ್ರಗಳಿಗೆ ಭೇಟಿ ದೀಪಾವಳಿ ಹಬ್ಬ ಆಚರಿಸಿರುವ ಮೋದಿ ಅವರು ಇಂದು ಕಾರ್ಗಿಲ್‌ಗೆ ಭೇಟಿ ನೀಡಿ ಅಲ್ಲಿನ ಯೋಧರೊಂದಿಗೆ ಹಬ್ಬ ಆಚರಿಸಿ ಸಂಭ್ರಮಿಸಿದರು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಈ ಮಂಗಳಕರ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಯೋಗಕ್ಷೇಮದ ಚೈತನ್ಯವನ್ನು ಹೆಚ್ಚಿಸಲಿ. ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಬ್ಬ ಆಚರಿಸಿ ಖುಷಿಪಡಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಕಾರ್ಗಿಲ್‌ನಲ್ಲಿ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ
