• Slide
    Slide
    Slide
    previous arrow
    next arrow
  • ಹೊನ್ನಾವರ: ಸೊಳ್ಳೆಗಳ ಕಾಟ ಹೆಚ್ಚಳ

    300x250 AD

    ಹೊನ್ನಾವರ: ತಾಲೂಕಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ರಕ್ತಾಸುರನಂತೆ ಮನುಷ್ಯರ ರಕ್ತ ಹೀರುವ ರಕ್ಕಸರೂಪಿಯಂತೆ ದೊಡ್ಡ ದೊಡ್ಡ ಸೊಳ್ಳೆಗಳು ಕಾಯಿಲೆಗಳಿಗೆ ಕಾರಣವಾಗುತ್ತಿದೆ.
    ಮಳೆ ಬಂದಾಗ ಖಾಲಿ ಪ್ರದೇಶದಲ್ಲಿ ನೀರು ನಿಂತು ಅವುಗಳಲ್ಲಿ ಸೊಳ್ಳೆಗಳು ಸೃಷ್ಟಿಯಾಗುತ್ತವೆ. ಸಿಹಿ ನೀರಿನಲ್ಲಿ ಸೃಷ್ಟಿಯಾಗುವ ಸೊಳ್ಳೆಗಳು ಡೆಂಗ್ಯೂ, ಚಿಕೂನ್ ಗುನ್ಯಾನಂತಹ ಜೀವಕ್ಕೆ ಮಾರಕ ರೋಗರುಜಿನಗಳಿಗೆ ಕಾರಣವಾಗುತ್ತಿವೆ. ಈ ಮಾದರಿಯ ಸೊಳ್ಳೆಗಳು ಹೆಚ್ಚಾಗಿದ್ದು, ಜನರು ಆತಂಕದಲ್ಲಿ ಕಳೆಯುವಂತಾಗಿದೆ. ಕೆಲವೆಡೆ ಜನರು ಜ್ವರಭಾದೆಯಿಂದ ಬಳಲುತ್ತಿದ್ದು ಹವಾಮಾನ ವೈಪರೀತ್ಯಗಳಿಂದಿರಬಹುದೆಂದು ನಿರ್ಲಕ್ಷಿಸಿ ಸ್ಥಳೀಯ ಕ್ಲಿನಿಕ್ ಗಳಲ್ಲಿ ಜ್ವರಕ್ಕೆ ಔಷಧಿ ಪಡೆದು ಸುಧಾರಿಸಿಕೊಳ್ಳುತ್ತಿದ್ದಾರೆ. ಜ್ವರ ಕಡಿಮೆಯಾಗದಾಗ ಮಾತ್ರ ತಜ್ಞ ವೈದ್ಯರ ಮೊರೆ ಹೋಗುತ್ತಿದ್ದಾರೆ.
    ಕಟ್ಟಡ ನಿರ್ಮಾಣ ಪ್ರದೇಶ, ಖಾಲಿ ನಿವೇಶನಗಳು, ಚರಂಡಿ, ತ್ಯಾಜ್ಯ ವಿಂಗಡಣಾ ಘಟಕ ಸುತ್ತಮುತ್ತಲ ಪ್ರದೇಶಗಳು ಇದರ ಆವಾಸ ಸ್ಥಾನವಾದಂತಾಗಿದೆ. ಎಳನೀರು ಕುಡಿದು ಅಲ್ಲಲ್ಲಿ ಎಸೆಯುವುದು.ಇದರಿಂದ ಮಳೆ ಬಂದಾಗ ನೀರು ತುಂಬಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಜನರು ಸೊಳ್ಳೆ ಪರದೆ, ಬತ್ತಿ, ಸ್ಪ್ರೇಗಳ ಅವಲಂಭಿಸಿ ನಿದ್ದೆ ಮಾಡುವಂತಾಗಿದೆ. ಸೊಳ್ಳೆ ಕಚ್ಚಿಸಿಕೊಂಡು ಆಸ್ಪತ್ರೆ ಸೇರುವ ಪರಿಸ್ಥಿತಿಗೆ ತಲುಪಿದ್ದಾರೆ.
    ಪಟ್ಟಣದ ಸುತ್ತಮುತ್ತಲ ಪ್ರದೇಶ ಹಾಗೂ ಕೊಳಗೇರಿಗಳಲ್ಲಿ ಸೊಳ್ಳೆಗಳ ಹಾವಳಿ ಜಾಸ್ತಿ ಇದೆ. ಇಲ್ಲಿನ ಪ್ರದೇಶದ ಮಳೆ ನೀರು ಕಾಲುವೆ ಹಾಗೂ ಮೋರಿಗಳ ಕಸ ಎತ್ತದ ಕಾರಣ ನೀರು ನಿಂತು ಸೊಳ್ಳೆ ಪ್ರಮಾಣ ಜಾಸ್ತಿಯಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಅಲ್ಲಲ್ಲಿ ಕಳೆ ಗಿಡಗಳು ಬೆಳೆದು ನಿಂತಿವೆ. ಕೆಲವೆಡೆ ರಸ್ತೆ ಬದಿಗಳಲ್ಲಿ ಜನರು ಕಸ ತಂದು ರಾಶಿ ಸುರಿಯುತ್ತಿದ್ದಾರೆ. ಹೀಗಾಗಿ ಸೊಳ್ಳೆಗಳು ಉತ್ಪತ್ತಿ ಜಾಸ್ತಿಯಾಗಿದೆ. ಸಾರ್ವಜನಿಕ ಶೌಚಾಲಯಗಳನ್ನು ಬಳಸದೇ ಬೀದಿ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡುವ ಕಾರಣ ಅಲ್ಲೂ ಸೊಳ್ಳೆಗಳು ಸೃಷ್ಟಿಯಾಗುತ್ತಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top