ಶಿರಸಿ: ಮಹಿಳೆಯರು ಮನೆಯಲ್ಲೆ ತಯಾರಿಸಿದ ಗೃಹ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅಣಿಗೊಳಿಸಿದ್ದ ಒಕ್ಕೂಟ ಸಂತೆ ಗ್ರಾಹಕರ ಗಮನ ಸೆಳೆಯಿತು.
ತಾಲೂಕಿನ ಬಿಸ್ಲಕೊಪ್ಪದಲ್ಲಿ ಗ್ರಾಮಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಪಂಚಾಯತ ಆವಾರದಲ್ಲಿ ಆಯೋಜಿಸಿಲಾಗಿತ್ತು.
ಪಂಚಾಯತ ಅಧ್ಯಕ್ಷ ರಾಘವೇಂದ್ರ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾವಯವ ಗೊಬ್ಬರದಿಂದ ಬೆಳೆಯುವ ತರಕಾರಿಗಳ ಉತ್ಪನ್ನಗಳು ಆರೋಗ್ಯದ ಹಿತದೃಷ್ಟಿಯಿಂದ ಉತ್ತಮವಾಗಿವೆ. ಮಹಿಳೆಯರು ಇದರಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಒಕ್ಕೂಟ ಸಂತೆಯಲ್ಲಿ ಹತ್ತಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘದವರು ಭಾಗವಹಿಸಿ ಹಲವಾರು ಗೃಹ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಸಿದ್ಧಪಡಿಸಿದ್ದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಸವಿತಾ ಪೂಜಾರಿ, ಪತ್ರಕರ್ತೆ ವಿನುತಾ ಹೆಗಡೆ ಸೇರಿದಂತೆ ಪಂಚಾಯತ ಸದಸ್ಯರು, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಮತ್ತು ನೂರಾರು ಗ್ರಾಹಕರು ಭಾಗಿಯಾಗಿದ್ದರು.