ಕುಮಟಾ: ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ಈಜಲು ಹೋಗಿ ಸಮುದ್ರದಲ್ಲಿ ಮುಳುಗಿದ್ದ ಚಲನಚಿತ್ರ ನಟನನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಹೈದ್ರಬಾದ್ ಮೂಲದ ಚಿತ್ರನಟ ಅಖಿಲ್ ರಾಜ್ (26) ರಕ್ಷಣೆಗೊಳಗಾದವರಾಗಿದ್ದು , ಇವರು ಗೋಕರ್ಣದ ಸಮುದ್ರದಲ್ಲಿ ಈಜಲು ಹೋದಾಗ ಸುಳಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ. ಗೋಕರ್ಣ ಅಡ್ವೆಂಚರ್ ಸಂಸ್ಥೆಯ ಸಿಬ್ಬಂದಿ ಹಾಗೂ ಲೈಪ್ ಗಾರ್ಡ್ ಸಿಬ್ಬಂದಿ ಸಮುದ್ರದ ಸುಳಿಯಲ್ಲಿ ಸಿಲುಕಿ ಕೊಂಡಿರುವ ನಟನನ್ನು ಕಂಡು ಜಟ್ ಸ್ಕೀ ವಾಟರ್ ಬೈಕ್ ಮೂಲಕ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.
ಸಮುದ್ರದ ಸುಳಿಯಲ್ಲಿ ಸಿಲುಕಿದ್ದ ನಟನನ್ನು ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ
