Slide
Slide
Slide
previous arrow
next arrow

ರಂಗಪ್ರವೇಶಕ್ಕೆ ಸಜ್ಜಾದ ವಿ.ನವ್ಯಾ ಭಟ್

300x250 AD

ಶಿರಸಿ: ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ಅ.22, ಶನಿವಾರ ಸಂಜೆ 5.30 ರಿಂದ ಶ್ರೀಮತಿ ಸೀಮಾ ಭಾಗ್ವತ್ ಅವರ ಶಿಷ್ಯೆ ವಿ.ನವ್ಯಾ ಭಟ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾದ ವಿದೂಷಿ ಹೇಮಾ ವಾಗ್ಮೋಡೆ ಹುಬ್ಬಳ್ಳಿ ಆಗಮಿಸಲಿದ್ದಾರೆ.

ಹಿಮ್ಮೇಳದಲ್ಲಿ ನಟುವಾಂಗದಲ್ಲಿ ದೀಪಾ ಭಾಗ್ವತ್, ವಿ.ಸೀಮಾ ಭಾಗ್ವತ್, ಹಾಡುಗಾರಿಕೆಯಲ್ಲಿ ವಿ.ಬಾಲಸುಬ್ರಹ್ಮಣ್ಯ ಶರ್ಮ ಬೆಂಗಳೂರು, ಮೃದಂಗದಲ್ಲಿ ವಿ.ಹರ್ಷ ಸಾಮಗ ಬೆಂಗಳೂರು,ಕೊಳಲಿನಲ್ಲಿ ವಿ.ದೀಪಕ್ ಹೆಬ್ಬಾರ್ ಬೆಂಗಳೂರು, ವಯೊಲಿನ್’ನಲ್ಲಿ ವಿ.ಪ್ರಾದೇಶ್ ಆಚಾರ್ ಬೆಂಗಳೂರು, ರಿದಮ್ ಪ್ಯಾಡ್’ನಲ್ಲಿ ವಿ.ಪ್ರಸನ್ನ ಬೆಂಗಳೂರು ಸಾಥ್ ನೀಡಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ವಿ.ಮಂಜರಿ ಹೊಂಬಾಳಿ ಗದಗ ನಿರ್ವಹಿಸಲಿದ್ದಾರೆ.

ಕಿರು ಪರಿಚಯ:
ಶ್ರೀಮತಿ ಹೇಮಾವತಿ ಹಾಗೂ ರಾಮನಾಥ್ ಭಟ್ ಇವರ ಪುತ್ರಿಯಾದ ನವ್ಯಾ ಚಿಕ್ಕ ವಯಸ್ಸಿನಲ್ಲಿಯೇ ಭರತನಾಟ್ಯವನ್ನು ವಿ.ನಯನಾ ಪ್ರಭು ಇವರ ಬಳಿ ಕಲಿತು ಜ್ಯುನಿಯರ್ ಹಂತದ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ಹಾಗೂ ಸೀನಿಯರ್ ಹಾಗು ವಿದ್ವತ್ ಹಂತದ ಅಭ್ಯಾಸವನ್ನು ವಿ. ಸೀಮಾ ಭಾಗ್ವತ್ ಇವರ ಬಳಿ ಅಭ್ಯಸಿಸಿ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ನೇ ಸ್ಥಾನ, ಗಂಧರ್ವ ಮಹಾವಿದ್ಯಾಲಯದ ವಿಶಾರದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ತಮಿಳು ವಿಶ್ವವಿದ್ಯಾಲಯದಲ್ಲಿ ಭರತನಾಟ್ಯ ಎಮ್ಎ ಪದವಿ ಗಳಿಸುವುದರೊಂದಿಗೆ, ಕಥಕ್ ಡಿಪ್ಲೋಮ ಮುಗಿಸಿದ್ದಾರೆ. ಪ್ರಸ್ತುತ ಡೆಲ್ಲಿ ಪಬ್ಲಿಕ್ ಸ್ಕೂಲಿನಲ್ಲಿ ನೃತ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಉಪಾಧ್ಯೆ ಸ್ಕೂಲ್ ಆಫ್ ಡಾನ್ಸ್ ಬೆಂಗಳೂರಿನಲ್ಲಿ ಪಾರ್ಶ್ವನಾಥ್ ಉಪಾಧ್ಯೆ,ಶ್ರುತಿ ಗೋಪಾಲ್, ಹಾಗು ಆದಿತ್ಯ ಪಿವಿ ಇವರಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ.

300x250 AD

ಕರಾವಳಿ ಉತ್ಸವ, ಕದಂಬೋತ್ಸವ,ಪುಲಿಗೆರೆ ಉತ್ಸವ,ಮಲೆನಾಡು ಉತ್ಸವ,ಹೊರನಾಡು ಉತ್ಸವ,ಶಿರಸಿ ಉತ್ಸವ, ಬೆಂಗಳೂರಿನ ಸಪ್ತಕ, ನ್ಯಾಷನಲ್ ಕ್ಲಾಸಿಕಲ್ ಡಾನ್ಸ್ ಫೆಸ್ಟಿವಲ್ ಹೀಗೆ ಮುಂತಾದ ಕಡೆ ನೃತ್ಯ ಪ್ರದರ್ಶನ ನೀಡಿರುವ ನವ್ಯಾ ಕೇವಲ ನೃತ್ಯವಷ್ಟೇ ಅಲ್ಲದೆ ಸಂಗೀತ ನಾಟಕಗಳಲ್ಲೂ ಭಾಗವಹಿಸಿ ಬಹುಮುಖ ಪ್ರತಿಭೆ ಎನ್ನಿಸಿಕೊಂಡು ತನ್ನ ನಿರಂತರ ಶ್ರಮ,ಕಠಿಣ ಅಭ್ಯಾಸ, ಶೃದ್ಧೆ, ಗುರು ಹಿರಿಯರ ಆಶೀರ್ವಾದ, ಕುಟುಂಬದ ಸಹಕಾರ, ಪ್ರೋತ್ಸಾಹದಿಂದ ಇಂದು ಭರತನಾಟ್ಯ ರಂಗಪ್ರವೇಶಕ್ಕೆ ಸಜ್ಜಾಗಿ ನಿಂತಿದ್ದಾರೆ.

ಕಾರ್ಯಕ್ರಮಕ್ಕೆ ಸರ್ವ ಕಲಾಸಕ್ತರು ಆಗಮಿಸಿ ಕಲಾವಿದೆಯನ್ನು ಹಾರೈಸಿ, ಕಾರ್ಯಕ್ರಮವನ್ನು ಚಂದಗಾಣಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top