• Slide
    Slide
    Slide
    previous arrow
    next arrow
  • ಬೈಕ್ ಕಳ್ಳನ ಬಂಧಿಸಿದ ಮುಂಡಗೋಡ ಪೊಲೀಸರು

    300x250 AD

    ಮುಂಡಗೋಡ: ಪಟ್ಟಣದಲ್ಲಿ ಅ.17ರಂದು ಪೆಟ್ರೋಲ್ ಪಂಪ್ ಮುಂದೆ ಬೈಕ್ ಕಳುವು ಮಾಡಿದ್ದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.
    ತಾಲೂಕಿನ ಲಕ್ಕೋಳಿ ಗ್ರಾಮದ ಕೃಷ್ಣ ಸಿಂಗನಳ್ಳಿಯವರಿಗೆ ಸಂಬಂಧಿಸಿದ್ದ ಬೈಕ್ ಕಳುವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಬಡ್ಡಿಗೇರಿ ಗ್ರಾಮದ ವಿಠ್ಠೂ ಎಡಗೆಯನ್ನು ಬಂಧಿಸಿದ್ದಾರೆ.
    ಪಿಐ ಎಸ್.ಎಸ್.ಸಿಮಾನಿ ಮಾರ್ಗದರ್ಶನದಲ್ಲಿ ಪಿಎಸೈಗಳಾದ ಬಸವರಾಜ ಮಬನೂರ, ನಿಂಗಪ್ಪ ಜಕ್ಕಣ್ಣವರ, ಪ್ರೊಬೆಶನರಿ ಪಿಎಸೈ ಮಹೇಶ ಮಾಳಿ ನೇತೃತ್ವದ ತಂಡದಲ್ಲಿ ಸಿಬ್ಬಂದಿ ಮಹ್ಮದ ಸಲೀಂ, ಕೋಟೇಶ ನಾಗರವಳ್ಳಿ, ಬಸವರಾಜ ಲಮಾಣಿ, ಶಂಭುಲಿಂಗ ಜಾವೂರು, ಅರುಣ ಬಾಗೇವಾಡಿ ನಾಗರಾಜ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮುಂಡಗೋಡ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top