ಕುಮಟಾ : ತಾಲೂಕಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ರಂಗಾ ದಾಸ ಶಾನಭಾಗ ಹೆಗಡೆಕರ ಬಾಲಮಂದಿರ, ಸರಸ್ವತಿ ವಿದ್ಯಾ ಕೇಂದ್ರ, ಸಿ.ವಿ.ಎಸ್.ಕೆ ಪ್ರೌಢಶಾಲೆ, ಸರಸ್ವತಿ ಪಿಯು ಕಾಲೇಜ್ ಇವರುಗಳ ಸಹಯೋಗದಲ್ಲಿ ಅಂಗ ಸಂಸ್ಥೆಗಳ ಎಲ್ಲಾ ಮಾತ್ರ ಮಂಡಳಿಯ ಸದಸ್ಯರು ಪ್ರತೀ ವರ್ಷ ಬಹು ವಿಶಿಷ್ಟವಾಗಿ ಸಂಯೋಜಿಸುತ್ತಿರುವ “ದೀಪಾವಳಿ ಮೇಳ” ಕಾರ್ಯಕ್ರಮವು ಅ.22, ಶನಿವಾರ ಮಧ್ಯಾಹ್ನ 04:30 ಕ್ಕೆ ಸರಸ್ವತಿ ವಿದ್ಯಾ ಕೇಂದ್ರದ ಆಧಾರದಲ್ಲಿ ಸಂಯೋಜನೆಗೊಂಡಿದೆ.
ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರ ಇದರ ಮುಖ್ಯೋಪಾಧ್ಯಾಯರಾದ ಎಂ.ಟಿ ಗೌಡ ಕಾರ್ಯಕ್ರಮ ಉದ್ಘಾಟಿಸುವರು. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ವಿಠಲ ಆರ್ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ.
ದೀಪಾವಳಿ ಸಂಪ್ರದಾಯದ ಕುರಿತಾದ ವಿವಿಧ ಸ್ಪರ್ಧೆಗಳು, ಮಾತೆಯರು ಹಾಗೂ ಮಕ್ಕಳಿಂದ ಮಾರಾಟ ಮಳಿಗೆಗಳು, ದೀಪಾವಳಿ ಸಂದೇಶ, ಯೋಧರಿಗೆ ಸನ್ಮಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಹು ವಿಶೇಷವಾಗಿ ನರಕಾಸುರ ದಹನ ಕಾರ್ಯಕ್ರಮಗಳು ಸಂಯೋಜನೆಗೊಂಡಿದೆ. ಆ ದಿನ ಬೆಳಿಗ್ಗೆ ಮಾತೆಯರಿಗೆ ದೀಪಾವಳಿ ಸಾಂಪ್ರದಾಯಿಕ ವಸ್ತುಗಳನ್ನು ಬಳಸಿ ಆರತಿ ತಟ್ಟೆ ಅಲಂಕಾರ, ತೋರಣ ತಯಾರಿ ಹಾಗೂ ರಂಗವಲ್ಲಿ ಸ್ಪರ್ಧೆಗಳು ನಡೆಯಲಿದೆ.
ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸುವಂತೆ ಮಾತೃಮಂಡಳಿಯ ಅಧ್ಯಕ್ಷರುಗಳಾದ ಗಾಯತ್ರಿ ಪ್ರಭು, ಜಯಲಕ್ಷ್ಮಿ ಭಟ್ಟ, ಶೋಭಾ ಭಂಡಾರಿ ಹಾಗೂ ಸಂಸ್ಥೆಯ ಅಧ್ಯಕ್ಷರಾದ ವಿಠಲ ಆರ್ ನಾಯಕ ಹಾಗೂ ಎಲ್ಲಾ ವಿಶ್ವಸ್ಥರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.