Slide
Slide
Slide
previous arrow
next arrow

ಅ.23ಕ್ಕೆ ಪಂ.ಎಂ.ಪಿ.ಹೆಗಡೆ ಪಡಿಗೆರೆ ಗುರು ಗೌರವಾರ್ಪಣೆ ಕಾರ್ಯಕ್ರಮ

300x250 AD

ಶಿರಸಿ: ಕರ್ನಾಟಕ ಕಲಾಶ್ರೀ ಪುರಸ್ಕೃತ ಪಂ.ಎಂ.ಪಿ.ಹೆಗಡೆ ಪಡಿಗೆರೆ ಇವರಿಗೆ ಗುರು ಗೌರವಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಅ.23, ರವಿವಾರ ಮಧ್ಯಾಹ್ನ 3.30 ರಿಂದ ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಎನ್.ಭಟ್ ಸುಗಾವಿ ವಹಿಸಲಿದ್ದು,ಸುಬ್ರಾಯ್ ಹೆಗಡೆ, ಮತ್ತೀಹಳ್ಳಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಹಿರಿಯ ರುದ್ರವೀಣಾ ವಾದಕ ಆರ್.ವಿ.ಹೆಗಡೆ ಹಳ್ಳದಕೈ, ಕೆ.ಎಂ.ಎಫ್.ನಿರ್ದೇಶಕ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ, ಖ್ಯಾತ ಹಿಂದೂಸ್ತಾನಿ ಗಾಯಕ ಶ್ರೀಪಾದ್ ಹೆಗಡೆ ಸೋಮನಮನೆ ಉಪಸ್ಥಿತರಿರಲಿದ್ದಾರೆ. ಯಕ್ಷಶ್ರೀ ಪುರಸ್ಕೃತ ಎಂ.ಆರ್.ಹೆಗಡೆ ಸನ್ಮಾನ ಪಾತ್ರ ವಾಚಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವನ್ನು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top