ದಾಂಡೇಲಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವನ್ಯಪ್ರಾಣಿಯ ಉಗುರುಗಳು ಪತ್ತೆಯಾದ ಘಟನೆ ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ರಸ್ತೆಯಲ್ಲಿ ಬರುವ ದೇಶಪಾಂಡೆ ನಗರದ ಹತ್ತಿರ ನಡೆದಿದೆ.
ಖಚಿತ ಮಾಹಿತಿಯನ್ನಾಧರಿಸಿ ದಾಂಡೇಲಿ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ ಚಿರತೆಯ ಉಗುರುಗಳನ್ನೆ ಹೋಲುವಂತಹ ಉಗುರುಗಳು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಣಪತಿ ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಚಿಬ್ಬಲಗೇರಿಯ ಅಶೋಕ ಮಿರಾಶಿ ಎಂಬಾತನು ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಪ್ರಾಣಿ ಉಗುರುಗಳು ಪತ್ತೆ; ಓರ್ವ ವಶಕ್ಕೆ
