ಕಾರವಾರ: ಅಂಕೋಲಾ ಕಡೆಗೆ ಸ್ಟೀಲ್ ಕೊಂಡೊಯ್ಯುತ್ತಿದ್ದ ಸರಕು ಸಾಗಣೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನಗರದ ಹೊರವಲಯದ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ರಾತ್ರಿ ಪಲ್ಟಿಯಾಗಿದೆ.
ಘಟ್ಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ತಗ್ಗು ಪ್ರದೇಶಕ್ಕೆ ಲಾರಿ ಪಲ್ಟಿಯಾಗಿದೆ. ಘಟನೆ ತಿಳಿದ ಸ್ಥಳೀಯರು ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ದೂರು ದಾಖಲಾಗಿದೆ.
ಬಿಣಗಾ ಘಟ್ಟದಲ್ಲಿ ಲಾರಿ ಪಲ್ಟಿ!
