Slide
Slide
Slide
previous arrow
next arrow

ಪಿಎಸ್‌ಐ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಹಣಕ್ಕೆ ಬೇಡಿಕೆ!

300x250 AD

ಅಂಕೋಲಾ: ಇಲ್ಲಿನ ಪಿಎಸೈ ಪ್ರವೀಣಕುಮಾರ ಅವರ ಹೆಸರು ಹಾಗೂ ಫೊಟೊ ಬಳಸಿಕೊಂಡು ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.
ಪ್ರವೀಣಕುಮಾರ.ಪಿಎಸೈ ಎಂಬ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ, ಅವರ ಸ್ನೇಹಿತರಿಗೆ, ಪರಿಚಯಸ್ಥರಿಗೆ ಮೆಸೇಜ್ ಕಳುಹಿಸಿ, ತಮಗೆ ತುರ್ತಾಗಿ ಹಣಬೇಕೆಂದು ಅನೇಕರಿಗೆ ಹಣ ಕೇಳಿದ್ದಾರೆ. ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ವಿನಂತಿಸುತ್ತಿದ್ದಾರೆ. ವಂಚಕರಿಂದ ಸಂದೇಶ ಸ್ವೀಕರಿಸಿದ ಸ್ನೇಹಿತರು ಪ್ರವೀಣ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನನ್ನ ಹೆಸರು ಮತ್ತು ಫೋಟೋ ಬಳಸಿ ಯಾರೋ ಇನ್‌ಸ್ಟಾಗ್ರಾಂ ನಕಲಿ ಖಾತೆ ತೆರೆದು ಸಾರ್ವಜನಿಕರಲ್ಲಿ ಹಣ ಕೇಳುತ್ತಿರುವುದು ಕಂಡುಬಂದಿದೆ. ಯಾರು ಕೂಡ ಹಣ ಕಳುಹಿಸಬೇಡಿ ಎಂದು ಪಿಎಸೈ ಪ್ರವೀಣಕುಮಾರ ಅವರು ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top