• Slide
    Slide
    Slide
    previous arrow
    next arrow
  • ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರ ಮತ್ತೆ ವರ್ಗಾವಣೆ

    300x250 AD


    ಕಾರವಾರ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಾಗಿ ಪ್ರಭಾರ ಹುದ್ದೆಯನ್ನ ವಹಿಸಿಕೊಂಡಿದ್ದ ಮೋಹನ್ ಎಸ್ ಅವರನ್ನ ಮತ್ತೆ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಮೂರೇ ತಿಂಗಳಲ್ಲಿ ಮೂರು ಅಧಿಕಾರಿಗಳನ್ನ ಇಲಾಖೆ ಕಂದಂತಾಗಿದೆ ಎನ್ನಲಾಗಿದೆ.
    ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉಪನಿರ್ದೇಶಕರಾಗಿದ್ದ ಸೋಮಶೇಖರ್ ಎನ್ನುವ ಅಧಿಕಾರಿಯನ್ನ ಬಾಗಲಕೋಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿತ್ತು. ಇದಾದ ನಂತರ ಇಲಾಖೆಯ ಭೂ ವಿಜ್ಞಾನಿಯಾಗಿದ್ದ ಜಯರಾಮ್ ನಾಯ್ಕ ಎನ್ನುವವರಿಗೆ ಉಪನಿರ್ದೇಶಕ ಹುದ್ದೆಯ ಪ್ರಭಾರವನ್ನ ನೀಡಲಾಗಿತ್ತು.
    ಇದರ ನಡುವೆ ಧಾರವಾಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿದ್ದ ಮೋಹನ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರಭಾರವನ್ನ ನೀಡಿದ ಆದೇಶಿಸಲಾಗಿತ್ತು. ಬುಧವಾರ ಮತ್ತೆ ಅವರಿಗೆ ನೀಡಿದ ಪ್ರಭಾರವನ್ನ ರದ್ದು ಮಾಡಿ ಜಯರಾಮ್ ನಾಯ್ಕ ಅವರಿಗೆ ನೀಡಿದ್ದು ಮೋಹನ್ ಅವರಿಗೆ ಧಾರವಾಡಕ್ಕೆ ವರ್ಗಾಯಿಸಲಾಗಿದೆ.
    ಈ ಮೂಲಕ ಇಲಾಖೆಯಲ್ಲಿ ಮೂರೇ ತಿಂಗಳಲ್ಲಿ ಮೂವರು ಅಧಿಕಾರಿಗಳು ಉಪನಿರ್ದೇಶಕ ಹುದ್ದೆಯನ್ನ ಏರಿದಂತಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಕೆಂಪು ಕಲ್ಲು ಗಣಿಗಾರಿಕೆ ಇನ್ನಿತರ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎನ್ನುವ ಆರೋಪವಿದೆ.
    ಇದಲ್ಲದೇ ಸದ್ಯ ಮರಳುಗಾರಿಕೆ ಬಂದ್ ಇರುವ ಹಿನ್ನಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಗತ್ಯತೆ ಹೆಚ್ಚಾಗಿ ಇರುತ್ತದೆ ಎನ್ನಲಾಗುತ್ತದೆ. ಆದರೆ ಮೂರೇ ತಿಂಗಳಲ್ಲಿ ಮೂವರನ್ನ ವರ್ಗಾವಣೆ ಮಾಡಿದ್ದು ಇದೀಗ ಜಿಲ್ಲೆಯ ಜನರಲ್ಲಿ ಹಲವು ಸಂಶಯಗಳು ಮೂಡವಂತಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top