ಸಿದ್ದಾಪುರ: ಸಮಸ್ಯೆಗಳು ಜೀವನಕ್ಕೆ ಭಾರವಾಗಬಾರದು. ಅದನ್ನು ಸವಾಲಾಗಿ ಸ್ವೀಕರಿಸಬೇಕು. ಅಂಗನವಾಡಿ ಕೇಂದ್ರಗಳು ತಾಯಂದಿರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೇಂದ್ರಗಳಾಗಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ಅಡಿಕೆ ಭವದಲ್ಲಿ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಪೋಷಣ ಅಭಿಯಾನ, ವಿಕಲ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ, ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಬುಕ್ ವಿತರಣೆ ಮಾಡಿ ಮಾತನಾಡಿದರು.
ಗರ್ಭಿಣಿ ಹಾಗೂ ಬಾಣಂತಿ ಸ್ತ್ರೀಯರು ಸದೃಢರಾಗಿರಬೇಕು ಅವರಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶದ ಕೊರತೆ ಇರಬಾರದು. ಇದನ್ನು ಲಕ್ಷದಲಿಟ್ಟುಕೊಂಡು ಈ ಕಾರ್ಯಕ್ರಮವನ್ನು ಘೋಷಣೆ ಮಾಡಿ ಅನುಷ್ಠಾನಕ್ಕೆ ತರಲಾಗಿದೆ. ಗರ್ಭಿಣಿಯರು ಯಾವಾಗ ಆ ಪೌಷ್ಟಿಕತೆಯಿಂದ ತೊಂದರೆಗೊಳದಾಗುತ್ತಾರೋ ಅಂತ ಸಂದರ್ಭದಲ್ಲಿ ಮುಂದೆ ಹುಟ್ಟುವ ಮಗು ಸಹ ಅನೇಕ ಸಮಸ್ಯೆಗಳನ್ನು ಆರೋಗ್ಯದಲ್ಲಿ ಎದುರಿಸಬೇಕಾದ ಸಂದರ್ಭ ಬರುತ್ತದೆ. ಮಕ್ಕಳು ಸಹ ಪೌಷ್ಟಿಕಾಂಶದಿಂದ ಕೊರತೆ ಇಲ್ಲದೆ ದಷ್ಟಪುಷ್ಟವಾಗಿ ಹುಟ್ಟಬೇಕೆಂಬ ಉದ್ದೇಶದಿಂದ ಗರ್ಭಿಣಿಯರು ಸಹ ಅಷ್ಟೇ ಪೌಷ್ಟಿಕಾಂಶವನ್ನು ಹೊಂದಿದವರು ಆಗಿರಬೇಕು. ಇದೇ ಉದ್ದೇಶದಿಂದ 2016ರಲ್ಲಿ ಕೇಂದ್ರ ಸರ್ಕಾರ ಮಾತೃವಂದನ ಯೋಜನೆ ಸಹ ಘೋಷಣೆ ಮಾಡಿದೆ ಈ ಮಾತ್ರವಂದನ ಕಾರ್ಯಕ್ರಮದಲ್ಲಿ 5 ಸಾವಿರ ರೂಪಾಯಿಯನ್ನು ಗರ್ಭಿಣಿಯ ಸ್ತ್ರೀಯರಿಗೆ ನೀಡಲಾಗುತ್ತದೆ. ಸಿದ್ದಾಪುರ ತಾಲೂಕಿನಲ್ಲಿ ಒಂಬತ್ತು ಸಾವಿರ ಜನ ಫಲಾನುಭವಿಗಳು ಇದರ ಅನುಕೂಲವನ್ನು ಪಡೆದುಕೊಂಡಿದ್ದಾರೆ ಎಂದರು.
ಉದ್ಯೋಗಗಳು ಹೆಚ್ಚಾಗಬೇಕೆಂದು ಸಹಾಯಧನ ಪ್ರೋತ್ಸಾಹ ಧನ ನೀಡುವ ಅನೇಕ ಕಾರ್ಯಕ್ರಮಗಳನ್ನು ನಾವು ಮಾಡುತ್ತಿದ್ದೇವೆ. ನಿಮ್ಮ ಕೃಷಿ ಚಟುವಟಿಕೆ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಮಾಡುವುದಕ್ಕಾಗಿ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಹಾಗೂ ಕಾರ್ಯಕ್ರಮಗಳಿವೆ.
ಕೃಷಿ, ಹೈನುಗಾರಿಕೆ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಈ ಎಲ್ಲ ಇಲಾಖೆಗಳಿಗೆ ಸರ್ಕಾರದಿಂದ ಸಾಕಷ್ಟು ಕಾರ್ಯಕ್ರಮಗಳಿವೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಮಾರುತಿ ನಾಯ್ಕ, ಗುರುರಾಜ ಶಾನಬಾಗ, ನಾಮನಿರ್ದೇಶನ ಸದಸ್ಯ ರಾದ ಸುರೇಶ್ ನಾಯ್ಕ, ಮಂಜುನಾಥ ಭಟ್, ರಾಜೇಂದ್ರ ಕಿಂದ್ರಿ, ತಹಶಿಲ್ದಾರ ಸಂತೋಷ ಭಂಡಾರಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರಾವ್, ಅಡಿಕೆ ಮನೆಯ ಆರ್.ಎಸ್.ಹೆಗಡೆ ಉಪಸ್ಥಿತರಿದ್ದರು. ಸಿಡಿಪಿಓ ಪೂರ್ಣಿಮಾ ದೋಡ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶೋಭಾ ನಾಯ್ಕ ಪ್ರಾರ್ಥಿಸಿದರು, ನೀಲಮ್ಮ ನಾಯ್ಕ ನಿರೂಪಿಸಿದರು.