Slide
Slide
Slide
previous arrow
next arrow

ಮೊಬೈಲ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನೊಯೆಲ್ ಕೊಯೆಲೊ

300x250 AD

ಕಾರವಾರ: ಇತ್ತೀಚಿಗೆ ನೆಹರೂ ಯುವ ಕೇಂದ್ರ, ಜಿಲ್ಲಾಡಳಿತ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ನಮ್ಮ ಕಾರವಾರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವದಲ್ಲಿ ನಗರದ ನೊಯೆಲ್ ಕೊಯೆಲೊ ಮೊಬೈಲ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಈತನಿಗೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ ಪ್ರಮಾಣ ಪತ್ರ ಮತ್ತು ಬಹುಮಾನವನ್ನು ವಿತರಿಸಿದರು. ಇವರು ಸೆರೆ ಹಿಡಿದ ಮೊಬೈಲ್ ಛಾಯಾಚಿತ್ರ ನೋಡಿ ಎಸ್ಪಿ ಪ್ರಶಂಸೆ ವ್ಯಕ್ತಪಡಿಸಿದರು.

300x250 AD

ನೊಯೆಲ್ ಶಾಲಾ- ಕಾಲೇಜು ದಿನದಿಂದಲೇ ಅತ್ಯುತ್ತಮ ಹವ್ಯಾಸಿ ಛಾಯಾಚಿತ್ರಗಾರರಾಗಿದ್ದಾರೆ. ಇವರು ಸೆರೆ ಹಿಡಿದ ಉತ್ತಮ ಛಾಯಾಚಿತ್ರವು ವಿವಿಧ ಪತ್ರಿಕೆಗಳಲ್ಲಿ ಸಹ ಪ್ರಕಟವಾಗಿದೆ. ಈಗ ಅವರು ಕಾರವಾರದ ಕಡಲ ಸಿರಿ ಯುವ ಸಂಘದ ಸದಸ್ಯರಾಗಿದ್ದಾರೆ. ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮತ್ತಷ್ಟು ಉತ್ತಮ ಛಾಯಾಚಿತ್ರಗಳನ್ನು ಸೆರೆ ಹಿಡಿಯಿರಿ ಎಂದು ಕಡಲ ಸಿರಿ ಯುವ ಸಂಘದವರು ಮತ್ತು ಹಿತೈಷಿಗಳು ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top