• Slide
    Slide
    Slide
    previous arrow
    next arrow
  • ಅಪರಿಚಿತ ಶವದ ಗುರುತು ಪತ್ತೆಗೆ ಸಹಕರಿಸಿ

    300x250 AD

    ಕಾರವಾರ: ಸುಮಾರು 45 ರಿಂದ 50 ವರ್ಷ ವಯಸ್ಸಿನ ಅಪರಿಚಿತ ಗಂಡಸು ಕಳೆದ ಒಂದು ವಾರದ ಹಿಂದೆ ಅಘನಾಶಿನಿ ನದಿಯಲ್ಲಿ ಎಲ್ಲಿಯೋ ಬಹಿರ್ದೆಸೆಗೋ ಅಥವಾ ಇನ್ಯಾವುದೋ ಕಾರಣಕ್ಕೆ ನದಿಯಲ್ಲಿ, ಆಕಸ್ಮಾತ್ ಕಾಲು ಜಾರಿ ನದಿಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ ಉಸಿರುಗಟ್ಟಿ ಮೃತಪಟ್ಟಿದ್ದು, ಮೃತದೇಹವು ಅ.16ರ ಮದ್ಯಾಹ್ನ 1.30 ಗಂಟೆಗೆ ಕುಮಟಾ ತಾಲೂಕಾ ಮಣಕಿ ಹತ್ತಿರ ಅಘನಾಶಿನಿ ನದಿಯ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿರುತ್ತದೆ.

    ಈ ಬಗ್ಗೆ ಉಲ್ಲಾಸ ತಂದೆ ಜಾನ್ ಕುಮಾರ್ ಕುಮಟಾ ಇವರು ನೀಡಿದ ದೂರಿನಂತೆ ಕುಮಟಾ ಪೋಲೀಸ ಠಾಣಾ ಯು.ಡಿ.ಆರ್ ನಂಬರ 50/2022 ಕಲಂ: 174 ಸಿ.ಆರ್.ಪಿ.ಸಿ ನೇದರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತನ ಹೆಸರು, ವಿಳಾಸ ಪತ್ತೆಯಾಗಿರುವುದಿಲ್ಲ. ಮೃತನ ಹೆಸರು, ವಿಳಾಸ ಪತ್ತೆಯಾದಲ್ಲಿ ಕುಮಟಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08386- 222 333ಗೆ ಸಂಪರ್ಕಿಸಲು ಕುಮಟಾ ಠಾಣೆ ಪೊಲೀಸ್ ಉಪ ನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top